ನಟ ಮಹೇಶ್ ಬಾಬು ಪುತ್ರಿ ಸಿತಾರಾ ಹೆಸರು ದುರ್ಬಳಕೆ: ಪ್ರಕರಣ ದಾಖಲು

Movie News: ತೆಲುಗು ನಟ ಮಹೇಶ್ ಬಾಬು ಮತ್ತು ನಮೃತಾ ಪುತ್ರಿ ಸಿತಾರಾ ಈಗ ಫೆಮಸ್ ಸೆಲೆಬ್ರಿಟಿ. ಏಕೆಂದರೆ, ಈಕೆ ತನ್ನ ನಟನೆಯಿಂದ ಫೇಮಸ್ ಆದವರಲ್ಲ. ಅಪ್ಪನ ಇನ್‌ಫ್ಲುಯೆನ್ಸ್‌ನಿಂದ ಪ್ರಸಿದ್ಧರಾದವರಲ್ಲ. ಬದಲಾಗಿ ತಾವು ಮಾಡಿದ ಫೋಟೋಶೂಟ್ನಿಂದ ಸಂಭಾವನೆ ಪಡೆದು, ಅದನ್ನು ಉತ್ತಮ ಕಾರ್ಯಕ್ಕೆ ವ್ಯಯಿಸಿದ್ದಾರೆ. ಈ ಕಾರಣಕ್ಕಾಗಿ ಸಿತಾರಾ ಪ್ರಸಿದ್ಧಿ ಪಡೆದಿದ್ದಾರೆ.

ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿತಾರಾ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈಕೆಯ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆದು, ಈಕೆ ಮಹೇಶ್ ಬಾಬು ಮಗಳೇ ಎಂಬ ರೀತಿ, ಜನರನ್ನು ನಂಬಿಸಿ. ಅವರಿಗೆ ಕೆಲವು ಲಿಂಕ್‌ಗಳನ್ನು ಕಳಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹೇಶ್ ಬಾಬು ಇನ್‌ಸ್ಟಾ ಪೋಸ್ಟ್ ಹಾಕಿ, ಎಚ್ಚರಿಕೆ ನೀಡಿದ್ದಾರೆ.

ಸಿತಾರಾ ಹೆಸರು ಬಳಸಿ, ಲಿಂಕ್, ದುಡ್ಡಿಗಾಗಿ ರಿಕ್ವೆಸ್ಟ್ ಕಳಿಸಿದರೆ, ಅದಕ್ಕೆ ಪ್ರತಿಕ್ರಿಯಿಸದೇ, ಪೊಲೀಸರಿಗೆ ಮಾಹಿತಿ ನೀಡಿ ಎಂದು ಕೇಳಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಯಾರು ಈ ರೀತಿ ಸಿತಾರಾ ಹೆಸರು ದುರ್ಬಳಕೆ ಮಾಡಿದ್ದಾರೆಂದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸಿತಾರಾ ಬಳಸುವ ನಿಜವಾದ ಇನ್‌ಸ್ಟಾಗ್ರಾಮ್‌ನಲ್ಲಿ ಇದು ಸಿತಾರಾಳ ಏಕೈಕ ಇನ್‌ಸ್ಟಾಗ್ರಾಮ್ ಖಾತೆ. ಇದನ್ನು ಬಿಟ್ಟು ಈ ಹೆಸರಿನ ಯಾವುದೇ ಖಾತೆ ಇಲ್ಲ ಎಂದು ಹೇಳಿದ್ದಾರೆ.

3 Pan India ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ಜಾಹ್ನವಿ ಕಪೂರ್

ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್

ರಾಜ್ಯ ಸಭೆಯಲ್ಲಿ ಕ್ಷಮೆ ಕೇಳಿದ ನಟಿ, ಸಂಸದೆ ಜಯಾ ಬಚ್ಚನ್.. ಯಾಕೆ..?

About The Author