Movie News: ಐಎಎಸ್ ಅಧಿಕಾರಿ ಮತ್ತು ನಟ ಶಿವರಾಮ್‌ಗೆ ಹೃದಯಾಘಾತವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಸಂಪಂಗಿರಾಮನಗರದ ಎಚ್.ಜಿ.ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಶಿವರಾಮ್ ಅವರಿಗೆ 12 ದಿನಗಳ ಹಿಂದೆ ತೀವ್ರ ಹೃದಯಾಘಾತವಾಗಿದೆ. ಅಂದಿನಿಂದ ಇಂದಿನವರೆಗೂ ಶಿವರಾಮ್ ಅವರನ್ನು ಐಸಿಯುನಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಇಂದು ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಶಿವರಾಮ್ ಅವರಿಗೆ ಈಗ 71 ವರ್ಷ ವಯಸ್ಸಾಗಿದ್ದು, ಶಿವರಾಮ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.
ಶಿವರಾಮ್ ಅವರು ಟೈಗರ್, ಯಾರಿಗೆ ಬೇಡ ದುಡ್ಡು, ಬಾ ನಲ್ಲೆ ಮಧುಚಂದ್ರಕೆ ಸೇರಿ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.
ಶಕ್ತಿಕೇಂದ್ರ ವಿಧಾನಸೌಧದಲ್ಲಿ ಇಂಥ ಘಟನೆ ನಡೆದಿದ್ದು ಖಂಡನೀಯ: ಜಗದೀಶ್ ಶೆಟ್ಟರ್
ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ನಟಿ..