ನಟ ಪ್ರಮೋದ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಲಾಫಿಂಗ್ ಬುದ್ಧ ಸಿನಿಮಾದ ಬಗ್ಗೆ ಮಾತನಾಡಿದ್ದು, ಕೆಲವು ಇಂಟರೆಸ್ಟಿಂಗ್ ಸುದ್ದಿಗಳನ್ನ ಹಂಚಿಕೊಂಡಿದ್ದಾರೆ. ಅದಕ್ಕಿಂತ ಮುಂಚೆ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾದ ಬಗ್ಗೆಯೂ ಮಾತನಾಡಿದ ಪ್ರಮೋದ್, ಅದರಲ್ಲಿ ತಮ್ಮ ಪಾತ್ರದ ಬಗ್ಗೆ ಸಿಕ್ಕ ಮೆಚ್ಚುಗೆ ಬಗ್ಗೆ ಹೇಳಿದ್ದಾರೆ.
ಈ ಸಿನಿಮಾವನ್ನು ನೋಡಿ ಹಲವರು ಪ್ರಮೋದ್ ಅವರಿಗೆ ಕಾಲ್ ಮಾಡಿ, ಈವರೆಗೆ ನೀವು ನಟಿಸಿದ ಸಿನಿಮಾ ಒಂದು ಕಡೆ ಆದ್ರೆ, ಈ ಸಿನಿಮಾನೆ ಲೇವಲ್ಲೇ ಬೇರೆ. ಆ ರೀತಿ ನಟಿಸಿದ್ದೀರಾ ಅಂತಾ ಹೇಳಿದ್ದಾರಂತೆ. ಇನ್ನು ಇದರ ವಿಶೇಷತೆ ಅಂದ್ರೆ, ಈ ಸಿನಿಮಾದಲ್ಲಿ ಪೊಲೀಸ್ ಸ್ಟೇಶನ್ನೇ ತೋರಿಸದೇ, ಪೊಲೀಸರು ಆರೋಪಿಗಳ ವಿಚಾರಣೆ ಮಾಡುವ ಸೀನ್ ಶೂಟ್ ಮಾಡಲಾಗಿದೆಯಂತೆ.
ಇನ್ನು ಲಾಫಿಂಗ್ ಬುದ್ಧ ಸಿನಿಮಾಗೋಸ್ಕರ, ಪ್ರಮೋದ್ ಈಗ ಇರೋದಕ್ಕಿಂತ 18 ಕೆಜಿ ದಪ್ಪ ಆಗಿದ್ದಾರಂತೆ. ಡೈರೆಕ್ಟರ್ 25 ಕೆಜಿ ಹೆಚ್ಚು ಮಾಡಬೇಕು ಅಂತಾ ಹೇಳಿದ್ದರಂತೆ. ಆದ್ರೆ ಪ್ರಮೋದ್ 18 ಕೆಜಿ ಹೆಚ್ಚಾದಾಗ್ಲೇ, ಸಾಕು ಬಿಡಿ ಸರ್, ಈಗ ಶೂಟಿಂಗ್ ಶುರು ಮಾಡೋಣ ಅಂತಾ ಹೇಳಿಬಿಟ್ಟರಂತೆ. ಇನ್ನು ಈ ಸಿನಿಮಾ ಶೂಟಿಂಗ್ ಶುರುವಾಗಿದ್ದು 45ರಿಂದ 50 ದಿನ ಬೆಂಗಳೂರಿಂದ ಪ್ರಮೋದ್ ದೂರವಿರ್ತಾರೆ. ಭದ್ರಾವತಿಯನ್ನ ಶೂಟಿಂಗ್ ನಡೆಯಲಿದೆ.
ಇನ್ನು ಈ ಸಿನಿಮಾ ಬಗ್ಗೆ ಮಾತನಾಡಿದ ಪ್ರಮೋದ್ ಈ ಸಿನಿಮಾದಲ್ಲಿ ನಾನು ನಾನಾಗಿಯೇ ಕಾಣಿಸಿಕೊಳ್ಳಲಿದ್ದೇನೆ. ನನ್ನನ್ನು ಡೈರೆಕ್ಟ್ ಆಗಿ ನೋಡಿದವರು, ನಾನು ತುಂಬಾ ಸಿರಿಯಸ್ ಸ್ವಭಾವದವನು, ಮಾತಾಡ್ಸಿದ್ರೆ ಎಲ್ಲಿ ಹೊಡೆದು ಬಿಡ್ತೀನೋ ಅಂತಾ ತಿಳಿದುಕೊಂಡಿದ್ದಾರೆ. ಯಾಕಂದ್ರೆ ನಾನು ಸಿನಿಮಾ ಸೆಟ್‌ನಲ್ಲಿ ಹಾಗೆ ಇದ್ದೆ. ನಾನಾಯ್ತು ನನ್ನ ಕೆಲಸ ಆಯ್ತು ಅನ್ನೋ ರೀತಿ ಇದ್ದೆ. ಹಾಗಾಗಿ ಹಲವರು ನನ್ನನ್ನ ತಪ್ಪಾಗಿ ತಿಳಿದುಕೊಂಡಿದ್ರು. ಆದ್ರೆ ಈ ಸಿನಿಮಾದಲ್ಲಿ ನಾನು ನಾನಾಗಿಯೇ ನಟಿಸಿದ್ದೇನೆ ಎಂದಿದ್ದಾರೆ ಪ್ರಮೋದ್.