ನಟ ಪ್ರಮೋದ್ ಶೆಟ್ಟಿ ಬರೀ ಓರ್ವ ನಟನಷ್ಟೇ ಅಲ್ಲ, ಬದಲಾಗಿ ಒಂದು ಕುಟುಂಬದ ಯಜಮಾನ. ಇಬ್ಬರು ಮಕ್ಕಳ ತಂದೆ. ಅದರಲ್ಲೂ ಕೆಲ ದಿನಗಳ ಹಿಂದಷ್ಟೇ ಬಂದಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೆಲೆಬ್ರಿಟಿಯಾಗಿರುವ ಇಬ್ಬನಿಯ ತಂದೆ. ಆದ್ರೆ ಪ್ರಮೋದ್‌ಗೆ ತಾನು ತನ್ನ ಮಕ್ಕಳಿಗೆ ಟೈಮ್ ಕೊಡೋಕ್ಕೆ ಆಗ್ತಿಲ್ಲಾ ಅನ್ನೋ ಬೇಸರವಿದೆ. ಈ ಬಗ್ಗೆ ಪ್ರಮೋದ್ ಮಾತನಾಡಿದ್ದಾರೆ.
ಉಳಿದವರು ಕಂಡಂತೆ ಸಿನಿಮಾಗೆ ಒಪ್ಪಿಗೆ ಕೊಡುವಾಗ ಸುಪ್ರೀತಾ ಅವರು ಗರ್ಭಿಣಿಯಾಗಿದ್ದರು. ಪ್ರಮೋದ್‌ಗೆ ಇಬ್ಬನಿ ಹುಟ್ಟಿ 20 ದಿನದ ಬಳಿಕ ಪ್ರಮೋದ್ ಉಳಿದವರು ಕಂಡಂತೆ ಸಿನಿಮಾ ಶೂಟಿಂಗ್‌ಗಾಗಿ ನಾಲ್ಕು ತಿಂಗಳು ಮನೆಯಿಂದ ಹೊರಗುಳಿದಿದ್ದರು. ಹಾಗಾಗಿ ಅವರಿಗೆ ಮಗಳು 4 ತಿಂಗಳು ಹೇಗೆ ಬೆಳೆದಳು ಅನ್ನೋದೇ ಗೊತ್ತಾಗಲಿಲ್ಲ.
ನಂತರ ರಿಕ್ಕಿ ಸಿನಿಮಾ ಶೂಟಿಂಗ್‌ಗೆ ಸಮಯ ಹೋಗಿದ್ದು, ಮಗಳು 2 ವರ್ಷದವಳಾಗಿದ್ದೇ ಗೊತ್ತಾಗಲಿಲ್ಲ. ಈ ಮಗಳು ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಸೆಲೆಬ್ರಿಟಿಯಾಗಿದ್ದಾಳೆ. ಈ ಬಗ್ಗೆ ಪ್ರಮೋದ್‌ಗೆ ಹೆಮ್ಮೆ ಇದೆ. ಗುರುವನ್ನು ಮೀರಿಸಿದ ಶಿಷ್ಯನಿದ್ದಂತೆ, ನನ್ನ ಮಗಳು ನನಗಿಂತ ದೊಡ್ಡ ಸೆಲೆಬ್ರಿಟಿಯಾಗಿದ್ದೇ ನನಗೆ ಖುಷಿ ಎಂದಿದ್ದಾರೆ ಪ್ರಮೋದ್.
ಇನ್ನು ಮಗಳೊಂದಿಗೆ ಟೈಮ್ ಸ್ಪೆಂಡ್ ಮಾಡೋಕ್ಕೆ ಆಗ್ತಿಲ್ಲ ಅಂತಾ ಪ್ರಮೋದ್ ಬೇಸರ ವ್ಯಕ್ತಪಡಿಸಿದ್ದಾರೆ. ಮೊನ್ನೆ ಲಾಕ್‌ಡೌನ್ ಆದ ಸಮಯದಲ್ಲಿ ನಾನು ಮಕ್ಕಳ ಜೊತೆ ಉತ್ತಮ ಸಮಯ ಕಳೆದೆ. ಮೊನ್ನೆ ಫಾದರ್ಸ್ ಡೇ ದಿನ ನನ್ನ ಮಗಳು ನನಗೆ ಜ್ವರ ಬಂದಿದೆ ನಾನು ಶಾಲೆಗೆ ಹೋಗಲ್ಲಾ ಅಂತಾ ಹೇಳಿದ್ಲು. ಆಗ ನಾನು ಆಕೆಯನ್ನು ಮಲಗಿಸಲು ಹೋದಾಗ, ನನಗೆ ಜ್ವರ ಬಂದಿಲ್ಲಾ ಇವತ್ತು ಫಾದರ್ಸ್ ಡೇ ಅಲಾ, ಅದಕ್ಕೆ ನಾನು ನಿಮ್ಮೊಟ್ಟಿಗೆ ಇರ್ತೇನೆ ಅಂತಾ ಹೇಳಿದಳಂತೆ ಇಬ್ಬನಿ.
ಇನ್ನು ಇಬ್ಬನಿ ಅನ್ನುವ ಹೆಸರು ಆಕೆಗೆ ಹೊಂದಾಣಿಕೆಯಾಗುವುದಿಲ್ಲ ಅಂತಾ ಜಾತಕ ನೋಡಿ ಹೇಳಿದ್ದಕ್ಕೆ, ಪ್ರಮೋದ್ ಇಬ್ಬನಿ ಹೆಸರನ್ನ ರಾಜ್ಞ್ಯಾ ಅಂತಾ ಬದಲಿಸಿದ್ದಾರೆ. ರಾಜ್ಞ್ಯಾ ಅಂದ್ರೆ ರಾಣಿ ಅಂತಾ ಅರ್ಥ. ಈ ರಾಜನಿಗೆ ಅವಳು ರಾಣಿ ಅಂತಾ ಖುಷಿಯಿಂದ ಹೇಳ್ತಾರೆ ಪ್ರಮೋದ್.