ಕಾಲೇಜು ದಿನಗಳಲ್ಲಿ ಪ್ರಮೋದ್‌ಗೆ ನಟನೆಯಲ್ಲಿ ಆಸಕ್ತಿ ಶುರುವಾಗಿತ್ತು. ರಂಗಭೂಮಿ ಇಷ್ಟವಾಗಿದ್ದ ಕಾರಣ, ಕಾಲೇಜಿನಲ್ಲಿ ಮಾತೃಕ ಅನ್ನೋ ಡ್ರಾಮಾ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಇವರ ಗುರುಗಳು, ಪ್ರಮುಖ ನಟನ ಪಾತ್ರವನ್ನೇ ಪ್ರಮೋದ್‌ಗೆ ಕೊಟ್ಟಿದ್ದರಂತೆ. ಆದ್ರೆ ಒಂದು ವಾರ ಪ್ರಾಕ್ಟೀಸ್ ಮಾಡಿದ ಬಳಿಕ ಇವರ ನಡಿಯ ಸ್ಟೈಲ್ ಇಷ್ಟವಾಗದ ಕಾರಣ, ಇವರ ಗುರುಗಳು, ಇವರನ್ನ ಎದ್ದೋಗು ಆಚೆ, ನೀನೊಬ್ಬ ಆ್ಯಕ್ಟರ್ ಆಗೋಕ್ಕೆ ನಾಲಾಯಕ್ ಅಂತಾ ಬೈದುಬಿಟ್ರಂತೆ.
ಇದಕ್ಕೆ ಕೋಪಗೊಂಡ ಪ್ರಮೋದ್, ಸೈಕಲ್ ತೊಕೊಂಡು ಹೋಗಿ, ನಾಲ್ಕೈದು ರೌಂಡ್ ಸುತ್ತು ಹಾಕಿದ್ರು. ಅದಾದ ಬಳಿಕ ಕೋಪ ತಣ್ಣಗಾಯಿತು. ಆಗ ಈ ಮಾತನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ಪ್ರಮೋದ್ ನಾನು ಆ್ಯಕ್ಟರ್ ಆಗಿ ತೋರಿಸಲೇಬೇಕೆಂದು ನಿರ್ಧರಿಸಿದರು. ಹೇಗೋ ಹಠದಿಂದಲೇ ಮತ್ತೆ ಮಾತೃಕ ನಾಟಕ ತಂಡ ಸೇರಿಕೊಂಡು, ಚೆನ್ನಾಗಿ ಆ್ಯಕ್ಟಿಂಗ್ ಮಾಡಿ ತೋರಿಸಿ, ಯಾವ ಗುರುಗಳು ತಮಗೆ ಛಿಮಾರಿ ಹಾಕಿದ್ದರೋ. ಅವರೇ ಖುಷಿ ಪಡುವಂತೆ ಮಾಡಿದ್ದರು ಪ್ರಮೋದ್.
ಇದೊದ ಬಳಿಕ ಪ್ರಮೋದ್‌ಗೆ ಹಲವಾರು ಊರು ಸುತ್ತಿ ನಾಟಕ ಮಾಡುವ ಅವಕಾಶಗಳು ಸಿಕ್ಕಿತು. ಹೀಗೆ ಒಂದು ಸಲ ಕಲಾಕ್ಷೇತ್ರದಲ್ಲಿ ಒಂದು ನಾಟಕದಲ್ಲಿ ಪ್ರಮೋದ್ ಪ್ರಮುಖ ಪಾತ್ರ ನಿರ್ವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದನ್ನು ನನ್ನ ಗುರುಗಳಿಗೆ ತೋರಿಸಿ, ನಾನು ಉತ್ತಮ ನಟ ಅನ್ನೋದನ್ನ ಪ್ರೂವ್ ಮಾಡಲೇಬೇಕು ಅಂತಾ ನಿರ್ಧರಿಸಿದ ಪ್ರಮೋದ್, ತಮ್ಮ ಗುರುಗಳಿಗೆ ನಾಟಕ ನೋಡಲು ಬರಹೇಳಿದರು.
ಆಗ ನಾನು ಪೂರ್ತಿ ನಾಟಕ ನೋಡಲು ಆಗುವುದಿಲ್ಲ, ನನಗೆ 10 ಗಂಟೆಗೆ ಮುಖ್ಯವಾದ ಕೆಲಸ ಇದೆ. ನಾನು ಅರ್ಧಗಂಟೆ ನಾಟಕ ನೋಡಿ, ಹೊರಡುತ್ತೇನೆ ಎಂದು ಹೇಳಿದ್ದ ಗುರುಗಳು, ಪೂರ್ತಿ ನಾಟಕ ನೋಡಿ ಖುಷಿ ಪಟ್ಟಿದ್ದರು. ಇದಾದ ಬಳಿಕ, ಪ್ರಮೋದ್ ಗೆಳೆಯನನ್ನು ಕರೆದು, ಪ್ರಮೋದ್ ಶೆಟ್ಟಿ ಮುಂದೊಂದು ದಿನ ಇಡೀ ಕರ್ನಾಟಕವೇ ಗುರುತಿಸುವಂಥ. ಪ್ರತಿಭಾನ್ವಿತ ನಟನಾಗುತ್ತಾನೆ. ಇದನ್ನು ಅವನಿಗೆ ಬರೆದಿಟ್ಟುಕೊಳ್ಳಲು ಹೇಳಿ ಎಂದು ಹೇಳಿ ಹೋದರಂತೆ.. ಸಾಧನೆ ಎಂದರೆ ಇದಲ್ಲವೇ….?