ನಟ ಪ್ರಮೋದ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಹೇಗಿತ್ತು ಅನ್ನೋದನ್ನ ಹೇಳಿದ್ದಾರೆ. ಅದರಲ್ಲೂ ಹಲವರು ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಗತಿ ಶೆಟ್ಟಿ, ಸುಪ್ರೀತಾ ಶೆಟ್ಟಿ ಮತ್ತು ಶೀತಲ್ ಶೆಟ್ಟಿ ಫ್ರೆಂಡ್‌ಶಿಪ್‌ಗೆ ಶೆಟ್ಟಿ ಗ್ಯಾಂಗ್ ಅಂತಾ ಹೆಸರಿಟ್ಟಿದ್ದಾರೆ. ಆದ್ರೆ ಪ್ರಮೋದ್ ಹೇಳೋದು, ಇದು ನಾವಾಗಿಯೇ ಕಟ್ಟಿಕೊಂಡ ಗ್ಯಾಂಗ್ ಅಲ್ಲ, ಅಚಾನಕ್ಕಾಗಿ ಸಿಕ್ಕ ಗೆಳೆತನ ಎಂದಿದ್ದಾರೆ.
ಉಳಿದವರು ಕಂಡಂತೆ ಸಿನಿಮಾ ಮಾಡುವಾಗ ಈ ಶೆಟ್ಟಿ ಟೀಮ್ ಹುಟ್ಟಿಕೊಂಡಿದ್ದು. ಈ ಸಿನಿಮಾಗೆ ರಕ್ಷಿತ್ ರಿಷಬ್ ಕಲಾವಿದರನ್ನ ಹುಡುಕುವ ವೇಳೆ, ಪ್ರಮೋದ್ ಶೆಟ್ಟಿ ಸಿಕ್ಕಿದ್ದು. ಇದಾದ ಬಳಿಕ ಮೀನು ಮಾರುವವಳ ಪಾತ್ರಕ್ಕೆ ಯಜ್ಞ ಶೆಟ್ಟಿ ಕರೆಕ್ಟ್ ಸೂಟ್ ಆಗ್ತಾರೆ ಅನ್ನೋ ಕಾರಣಕ್ಕೆ ಆಕೆಯೂ ಅದರಲ್ಲಿ ನಟಿಸಿದ್ದರು. ಇದಾದ ಬಳಿಕ ಜರ್ನಲಿಸ್ಟ್ ಪಾತ್ರಕ್ಕೆ ಸರ್ಚಿಂಗ್ ನಡೆಯುವಾಗ ಸಿಕ್ಕಿದ್ದೇ ಶೀತಲ್ ಶೆಟ್ಟಿ.
ಒಮ್ಮೆ ಪ್ರಮೋದ್ ನ್ಯೂಸ್ ನೋಡುವಾಗ, ಟಿವಿ9ನಲ್ಲಿ ಶೀತಲ್ ನ್ಯೂಸ್ ಹೇಳೋದನ್ನ ನೋಡಿದ್ರಂತೆ. ಆಕೆಯ ಹೆಸರು ಗೊತ್ತಿಲ್ಲದ ಕಾರಣ, ಪರಿಚಯಸ್ಥರಿಗೆ ಆಕೆಯ ಬಗ್ಗೆ ವಿಚಾರಿಸಲಾಯಿತು. ಆಗ ಶೀತಲ್ ಶೆಟ್ಟಿ ಎಂದು ಗೊತ್ತಾಯಿತು. ಶೆಟ್ಟಿ ಅನ್ನೋ ಕಾರಣಕ್ಕೆ ರಕ್ಷಿತ್, ಶೀತಲ್‌ರನ್ನ ರಿಜೆಕ್ಟ್ ಮಾಡಿದರಂತೆ. ಇದಾದ ಬಳಿಕ ಆ ಪಾತ್ರಕ್ಕೆ ತಕ್ಕವರು ಯಾರೂ ಸಿಗದ ಕಾರಣ, ಶೀತಲ್‌ರನ್ನೇ ಜರ್ನಲಿಸ್ಟ್ ಪಾತ್ರಕ್ಕೆ ಸೆಲೆಕ್ಟ್ ಮಾಡಲಾಯಿತು. ಹೀಗೆ ಶೆಟ್ಟಿ ಗ್ಯಾಂಗ್ ಹುಟ್ಟಿಕೊಂಡಿತು. ಇನ್ನು ರಾಜ್ ಬಿ ಶೆಟ್ಟಿ ಕೂಡ ಅಚಾನಕ್ಕಾಗಿ ನಮ್ಮ ಗ್ರೂಪ್‌ಗೆ ಆ್ಯಡ್ ಆಗಿದ್ದು ಅಂತಾರೆ ಪ್ರಮೋದ್.
ಇದಕ್ಕೆ ಇನ್ನೊಂದು ರೀತಿ ಉತ್ತರಿಸಿದ ಪ್ರಮೋದ್, ನಮ್ಮ ಟೀಮ್‌ನಲ್ಲಿ ಬರೀ ಶೆಟ್ಟಿಗಳೇ ಕೆಲಸ ಮಾಡಲ್ಲ. ಬೇರೆ ಬೇರೆ ಕಡೆಯಿಂದ ಬಂದ ಡೈರೆಕ್ಟರ್, ಆರ್ಟಿಸ್ಟ್‌ಗಳು ಕೆಲಸ ಮಾಡ್ತಾರೆ. ನೀವು ಬರೀ ಒಂದಿಬ್ಬರ ಹೆಸರು ನೋಡಿ ಅದನ್ನ ಶೆಟ್ಟಿ ಗ್ಯಾಂಗ್ ಅಂತಾ ಹೇಳಬಾರದು. ಸಂಘ ಕಟ್ಟಿ ಬಾವುಟ ಹಾರ್ಸಬೇಕು ಅಂತಾ ಬಂದವ್ರು ಯಾರೂ ಇಲ್ಲ, ಇದೆಲ್ಲ ಕೋ ಇನ್ಸಿಡೆನ್ಸ್ ಎಂದಿದ್ದಾರೆ ಪ್ರಮೋದ್ ಶೆಟ್ಟಿ.