ತಮ್ಮ ಸಿನಿ ಜರ್ನಿ ಬಗ್ಗೆ ಪ್ರಮೋದ್ ಶೆಟ್ಟಿ ಮಾತನಾಡಿದ್ದು, ಯಾವ ಯಾವ ಸ್ಟಾರ್ ಹೇಗೆ ಇದಾರೆ, ಅವರನ್ನ ಮೀಟ್ ಮಾಡಿದಾಗ ಇವರಿಗೆ ಅನ್ನಿಸಿದ್ದೇನು ಅನ್ನೋ ಬಗ್ಗೆ ಹೇಳಿದರು. ಇಂದು ರಾಕಿಂಗ್ ಸ್ಟಾರ್ ಯಶ್ ಅವರನ್ನ ಪ್ರಮೋದ್ ಮೊದಲು ಭೇಟಿ ಮಾಡಿದ್ದು ಯಾವಾಗ..? ಹಾಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಯಶ್, ಪ್ರಮೋದ್‌ಗೆ ಏನು ಹೇಳಿದ್ರು ಅನ್ನೋ ಬಗ್ಗೆ ಪ್ರಮೋದ್ ಮಾತನಾಡಿದ್ದಾರೆ.
ಪ್ರಮೋದ್ ಯಶ್ ಅವರನ್ನ ರಂಗಭೂಮಿಯಲ್ಲಿದ್ದಾಗಲೇ ಭೇಟಿಯಾಗಿದ್ದರಂತೆ. ಅಂದೇ ಅವರಿಬ್ಬರೂ ಪರಿಚಿತರಾಗಿದ್ದರು. ಆದ್ರೆ ಆ ದಿನಗಳಲ್ಲಿ ನಾಟಕಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದ ಕಾರಣ, ಹಾಯ್ ಬಾಯ್ ಅಷ್ಟೇ ಮಾತನಾಡುತ್ತಿದ್ದರಂತೆ. ಅದಾದ ಬಳಿಕ ಕೆಜಿಎಫ್ ಚಾಪ್ಟರ್ ಒನ್ ಬಂದ ಬಳಿಕವೇ ಪ್ರಮೋದ್ ಯಶ್‌ರನ್ನ ಭೇಟಿ ಮಾಡಿದ್ದು.
ನಾನು ಮತ್ತು ರಿಷಬ್ ನಮ್ಮ ಸಿನಿಮಾ ಸಾಂಗ್ ತೋರಿಸೋಕ್ಕೆ ಅಂತಾ ಯಶ್‌ರನ್ನ ಭೇಟಿ ಮಾಡೋಕ್ಕೆ ಹೋಗಿದ್ವಿ.. ಆಗಲೇ ನಮಗೆ ಈಗಿನ ಕೆಜಿಎಫ್ ಚಾಪ್ಟರ್ ಟೂ ಗುರಿ ಕಾಣಿಸುತ್ತಿತ್ತು. ಅವರ ಮಾತೇ ಹಾಗಿತ್ತು. ನೀವು ನಡೆಯುತ್ತಿರುವ ಹಾದಿ ಕರೆಕ್ಟ್ ಆಗಿದೆ. ನಿಮ್ಮ ಗುರಿ, ಪ್ಯಾನ್ ಇಂಡಿಯಾ ಸಿನಿಮಾದತ್ತ ಇರಲಿ ಅಂತಾ ಅವರು ನಮಗೆ ಹೇಳಿದ್ದರು. ಮಿಡಲ್ ಕ್ಲಾಸ್ ಮೆಂಟಾಲಿಟಿಯಿಂದ ಬಂದು, ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಬಗ್ಗೆ ಹೆಮ್ಮೆ ಇದೆ ಅಂತಾರೆ ಪ್ರಮೋದ್ ಶೆಟ್ಟಿ.
ಯಶ್, ಸುದೀಪ್ ಮತ್ತು ದರ್ಶನ್ ಸೇರಿ ಹಲವು ನಟರ ಬಗ್ಗೆ ನಾವು ಬೇರೆಯದನ್ನೇ ಕೇಳಿರುತ್ತೇವೆ. ಆದ್ರೆ ಅವರನ್ನು ಭೇಟಿಯಾದಾಗ ಮಾತ್ರ ಅವರೇನು ಅಂತಾ ತಿಳಿಯುತ್ತದೆ. ಅವರ ಹಾಗೆ ನಾವಾಗಬೇಕು ಎನ್ನಿಸುತ್ತದೆ. ಈ ನಟರೆಲ್ಲ ನಾವು ತಿಂಗಳಿಗೆ ನಮಗಾಗಿ ಖರ್ಚುಮಾಡುವ ಮೊತ್ತದಷ್ಟು ಹಣವನ್ನ, ಅವರು ವಾರಕ್ಕೆ ಖರ್ಚು ಮಾಡುತ್ತಾರೆ. ಆದ್ರೆ ಅವರಿಗಲ್ಲ ಬದಲಾಗಿ, ಅವರ ಮನೆ ಮುಂದೆ ಸಹಾಯ ಕೇಳಿ ಬರುವ ಜನರಿಗಾಗಿ ಖರ್ಚು ಮಾಡುತ್ತಾರೆ ಅಂತಾ ಹೇಳ್ತಾರೆ ಪ್ರಮೋದ್.