Thursday, May 30, 2024

Latest Posts

ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ..

- Advertisement -

Movie News: ನಟ, ನಿರ್ಮಾಪಕ ದ್ವಾರಕೀಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾತ್ರಿ ಲೂಸ್ ಮೋಷನ್ ಆಗಿ, ಆರೋಗ್ಯ ಹಾಳಾಗಿದ್ದು, ಬೆಳಿಗ್ಗೆ ಎದ್ದು ಕಾಫಿ ಕುಡಿದು, ನಿದ್ರಿಸಿದ್ದ ದ್ವಾರಕೀಶ್ ಮಲಗಿದ್ದಲ್ಲೇ, ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಷ್ಣು ವರ್ಧನ್‌ಗೆ ಬೆಸ್ಟ್ ಜೋಡಿಯಾಗಿ ನಟಿಸಿದ್ದ ದ್ವಾರಕೀಶ್ ಅವರ ಕಳ್ಳ ಕುಳ್ಳ ಸಿನಿಮಾ ಬೆಸ್ಟ್ ಕಾಂಬಿನೇಷನ್ ಆಗಿತ್ತು. ವಿಷ್ಣು ನಿಧನಕ್ಕೂ ಮುನ್ನ ಆಪ್ತಮಿತ್ರ ಸಿನಿಮಾದಲ್ಲಿ ದ್ವಾರಕೀಶ್ ಜೋಡಿಯಾಗಿ ನಟಿಸಿದ್ದರು. ಮೊದಲು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟ ದ್ವಾರಕೀಶ್, ಬಳಿಕ ಸಿನಿಮಾವನ್ನು ನಿರ್ದೇಶಿಸಿದರು ಮತ್ತು ನಿರ್ಮಾಣ ಕೂಡ ಮಾಡಿದ್ದರು.

ಇನ್ನು ಈ ಮೊದಲು ಹಲವು ಬಾರಿ ದ್ವಾರಕೀಶ್ ಸಾವಿನ ಸುದ್ದಿಕೇಳಿ ಬಂದಿತ್ತು. ಆದರೆ ಅದೆಲ್ಲವೂ ಫೇಕ್ ಎಂದು ಸ್ನತಃ ದ್ವಾರಕೀಶ್ ಸುದ್ದಿಗೋಷ್ಠಿ ಮಾಡಿ ಹೇಳಿದ್ದರು. ಈ ಬಾರಿಯೂ ಈ ಸುದ್ದಿ ಸುಳ್ಳು ಎಂದು ಎಲ್ಲರೂ ಭಾವಿಸಿದ್ದರು. ಆದರೆ ದ್ವಾರಕೀಶ್ ಕುಟುಂಬಸ್ಥರೇ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದ್ವಾರಕೀಶ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಮೊದಲು ನನಗೆ ಇಷ್ಟೆಲ್ಲ ಜನರ ಬೆಂಬಲ ಸಿಕ್ಕಿರಲೇ ಇಲ್ಲ: ಜಗದೀಶ್ ಶೆಟ್ಟರ್

ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಕುಮಾರಸ್ವಾಮಿ ಸಚಿವರಾದರೆ ಅಸ್ತಿತ್ವವೇ ಇರುವುದಿಲ್ಲವೆಂಬ ಭಯ ಡಿಕೆಶಿಗೆ ಕಾಡುತ್ತಿದೆ: ವಿಜಯೇಂದ್ರ

- Advertisement -

Latest Posts

Don't Miss