Tuesday, April 29, 2025

Latest Posts

ಕುಮಾರಸ್ವಾಮಿ ಸಚಿವರಾದರೆ ಅಸ್ತಿತ್ವವೇ ಇರುವುದಿಲ್ಲವೆಂಬ ಭಯ ಡಿಕೆಶಿಗೆ ಕಾಡುತ್ತಿದೆ: ವಿಜಯೇಂದ್ರ

- Advertisement -

Hassan News: ಹಾಸನ: ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ನಿನ್ನೆ ಪ್ರಧಾನಮಂತ್ರಿಗಳ ಮಂಗಳೂರು, ಮೈಸೂರು ಪ್ರವಾಸ ಮಾಡಿದ್ದಾರೆ. ಕೇವಲ ಮೈಸೂರು, ಮಂಗಳೂರು ಮಾತ್ರವಲ್ಲ ಇಡೀ ರಾಜ್ಯಕ್ಕೆ, ಒಂದು ದೇಶಕ್ಕೆ ಸಿಕ್ಕಿದೆ. ಇಡೀ ರಾಜ್ಯದ ನಮ್ಮ ಕಾರ್ಯಕರ್ತರಲ್ಲಿ ಒಂದು ಸಂಚಲನ ಮೂಡಿದೆ. ಇನ್ನೂ ಹೆಚ್ಚು ಉತ್ಸಾಹದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಒಕ್ಕಲಿಗರಿಗೆ ಚೂರಿ ಹಾಕಿದವರನ್ನು ಸ್ವಾಮೀಜಿ ಬಳಿ ಕರೆದುಕೊಂಡು ಹೋಗಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಪಾಪ ಅವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿಯಿಲ್ಲ ಇನ್ನೇನು ರಾಜಕೀಯ ಮುಗಿದೆ ಹೋಯಿತು. ಇನ್ನೇನಿದ್ದರು ನಾನೇ ಎನ್ನುವ ಭ್ರಮೆಯಲ್ಲಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಗೆದ್ದ ನಂತರ ಸಚಿವರಾದರೇ ಅವರ ಅಸ್ಥಿತ್ಬ ಇರೋದಿಲ್ಲ ಅನ್ನುವ ಭಯ ಅವರಿಗೆ ಕಾಡ್ತಾ ಇದೆ. ಹಾಗಾಗಿ ಈ ರೀತಿ ಹೇಳಿಕೆಯನ್ನು ಕೊಡ್ತಾ ಇದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಕಾರಣ ಏನೇ ಇರಲಿ, ನಾನು ದಿಂದಾಲೇಶ್ವರ ಸ್ವಾಮೀಜಿ ಮನವಿ ಮಾಡುತ್ತೇನೆ. ಚುನಾವಣೆ ಮುಗಿದ ಮೇಲೆ ಎಲ್ಲಾ ಸಮಸ್ಯಗೆ ಪರಿಹಾರ ಕಂಡುಕೊಳ್ಳಬಹುದು. ಇವತ್ತು ಪ್ರತಿಯೊಬ್ಬರು ನರೇಂದ್ರಮೋದಿ ಅವರನ್ನು ನೋಡಬೇಕು. ದೇಶದ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಗೆಲ್ಲವುದರಲ್ಲಿ ಯಾವುದೇ ಅನುಮಾನ ನಮಗಿಲ್ಲ. ಯಾವುದೇ ಕಾರಣಕ್ಕೂ ಪ್ರಹ್ಲಾದ್ ಜೋಶಿವರು ಕೇಂದ್ರ ಮಂತ್ರಿ ಅವರು ಗೆದ್ದೆ ಗೆಲ್ತಾರೆ. ಏನೇ ವೈಮನಸ್ಸಿದ್ದರು ಸ್ವಾಮೀಜಿ ನಮ್ಮ ಜೊತೆ ಕೈಜೋಡಿಸಬೇಕು. ದೇಶದ ಹಿತದೃಷ್ಟಿಯಿಂದ ನಮ್ಮ‌ ಜೊತೆ ಕೈಜೋಡಿಸಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.

ಈಶ್ವರಪ್ಪ ನಾಮಪತ್ರ ಸಲ್ಲಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಕ್ಷೇತ್ರದ ಮತದಾರರು ಕೂಡ ಕ್ರಮ ಕೈಗೊಳ್ತಾರೆ. ಅವರು ಎಷ್ಟೆಷ್ಟು ಮಾತಾಡ್ತಾರೆ ಅದರ ದುಪ್ಪಟ್ಟು ಮತಗಳು ರಾಘವೇಂದ್ರ ಅವರಿಗೆ ಬೀಳುತ್ತವೆ. ರಾಘವೇಂದ್ರ ಅವರು ಒಬ್ಬ ಜನಪ್ರಿಯ ಸಂಸದರಿದ್ದಾರೆ. ಈ ರೀತಿಯ ಪುಕ್ಸಟ್ಟೆ ಮಾತಗಳನ್ನು ಜನರು ಗಮನಿಸುತ್ತಾರೆ. ಈಶ್ವರಪ್ಪ ಅವರು ಮಂತ್ರಿಯಾಗಿ ಶಿವಮೊಗ್ಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿಯಾಗಿ ಶಿವಮೊಗ್ಗ ಜಿಲ್ಲೆಗೆ ಅವರ ಕೊಡುಗೆ ಏನು. ರಾಘವೇಂದ್ರ ಅವರು ಸಂಸದರಾಗಿ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಜಿಲ್ಲೆಗೆ, ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮನೆ ಮನೆಯಲ್ಲೂ ಮಾತನಾಡುತ್ತಾರೆ. ಅವರಿಂದ ಕಲಿಯಬೇಕಾದ ಅವಶ್ಯಕತೆ ಇಲ್ಲ. ಇವತ್ತು ಸಂಸದರಾಗಿರುವ ರಾಘವೇಂದ್ರ ಅವರು ಎರಡು ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆದ್ದು ಬರ್ತಾರೆ. ಜನ ಅವರಿಗೆ ಏನು ಬುದ್ದಿ ಕಲಿಸಬೇಕು, ಕಲಿಸುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಬಹಳ ಅಬ್ಬರದ ಪ್ರಚಾರ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಆದರೆ ಮತದಾರರ ಭಾವನೆಯೇ ಬೇರೆ ಇದೆ. ಮತದಾರರು ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಬದಲಾವಣೆಯನ್ನು ಬಯಸುತ್ತಿದ್ದಾರೆ. ಒಬ್ಬ ಸಜ್ಜನ, ಖ್ಯಾತ ವೈದ್ಯ, ಜನಾನುರಾಗಿ ಆಗಿರುವ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದವರು, ಡಿ.ಕೆ.ಶಿವಕುಮಾರ್ ಗಾಬರಿಯಾಗಿ ಒಂದಲ್ಲ ಎರಡಲ್ಲ ನಾಲ್ಕು ಜನ ಮಂಜುನಾಥ್ ಅವರನ್ನು ಹುಡುಕಿಕೊಂಡು ಬಂದಿದ್ದಾರೆ. ಅದರಲ್ಲಿ ಅವರು ಎಷ್ಟು ಗಾಬರಿಯಾಗಿದ್ದಾರೆ ಅಂತ ಗೊತ್ತಾಗುತ್ತೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಐದು ಹತ್ತು ವರ್ಷ ಆಡಳಿತವಲ್ಲ, ಆಂತರಿಕ ಕಚ್ಚಾಟದಿಂದ ಸರಕಾರ ಬದಲಾವಣೆ ಆಗುತ್ತೆ: ಜೋಶಿ ವ್ಯಂಗ್ಯ

ಪ್ರಧಾನಿ ಮೋದಿಯಿಂದ ಮಂಗಳೂರಿನಲ್ಲಿ ರೋಡ್‌ ಶೋ: ಕೇಸರಿಮಯವಾದ ಕುಡ್ಲ..

ಮೋದಿಯವರು ಹೇಳಿರುವ ಅಭಿವೃದ್ಧಿ ಯೋಜನೆಗಳು ಬರೀ ಟ್ರೈಲರ್ ಅಷ್ಟೇ, ಸಾಧಿಸುವುದು ಬಹಳಷ್ಟಿದೆ: ಸುಮಲತಾ

- Advertisement -

Latest Posts

Don't Miss