Wednesday, October 22, 2025

Latest Posts

ಮಮ್ಮಲ ಮರುಗುವಂತೆ ಮಾಡ್ತಿದೆ ಅಪ್ಪು ಹಾಡಿದ ಈ ಕೊನೆಯ ಹಾಡು..!

- Advertisement -

ಬೆಂಗಳೂರು- ನಿನ್ನೆ ರಾತ್ರಿ ಎಲ್ಲರೊಂದಿಗೆ ನಗುನಗುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು  ಕಂಠೀರವ ಕ್ರೀಡಾಂಗಣದಲ್ಲಿ ಸ್ತಬ್ಧರಾಗಿ ಮಲಗಿದ್ದಾರೆ. ಇಂದು ಬೆಳಗ್ಗೆವರೆಗೂ ಚೆನ್ನಾಗಿಯೇ ಇದ್ದ ಅಪ್ಪು, ಜಿಮ್ ಮುಗಿಸಿ ಮನೆಯೊಳಗೆ ಬರುತ್ತಿದ್ದಂತೆಯೇ ತೀವ್ರ ಅಸ್ವಸ್ಥರಾಗಿದ್ರು. ಕಡೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಆದ್ರೆ ನಿನ್ನೆಯಷ್ಟೇ ಸಂಗೀತ ನಿರ್ದೇಶಕ ಗುರುಕಿರಣ್ ಬರ್ತ್ ಡೇಗೆ ಹಾತರಾಗಿದ್ದ ಅಪ್ಪು, ಅಲ್ಲಿ ಎಲ್ಲರ ಜೊತೆಗೂಡಿ ಹಾಡು ಹೇಳ್ತಾ ಕಾಲ ಕಳೆದಿದ್ದಾರೆ. ಬರ್ತ್ ಡೇ ಪಾರ್ಟಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಸುಮಲತಾ, ಉಪೇಂದ್ರ ಸೇರಿದಂತೆ ಮತ್ತಿತರರೊಂದಿಗೆ ಭರ್ಜರಿ ಹಾಡು ಹೇಳಿ ಸಂತೋಷದ ಕ್ಷಣಗಳನ್ನು ಕಳೆದಿದ್ದಾರೆ.

ಈ ವಿಡಿಯೋ ಸದ್ಯ ವೈರಲ್ ಆಗ್ತಿದ್ದು, ಪವರ್ ಸ್ಟಾರ್ ಅಭಿಮಾನಿಗಳು ಇದನ್ನು ನೋಡಿ ಮತ್ತಷ್ಟು ಮಮ್ಮಲ ಮರುಗುತ್ತಿದ್ದಾರೆ. ಈ ವಿಡಿಯೋ  ಜೀವನ ಅದೆಷ್ಟು ಕ್ಷಣಿಕ ಅನ್ನೋದನ್ನ ಮತ್ತೆ ಮತ್ತೆ ಸಾರಿ ಹೇಳುತ್ತಿದೆ.

- Advertisement -

Latest Posts

Don't Miss