ಮಂಡ್ಯ: 2023ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಹಿನ್ನಲೆ, ಮಂಡ್ಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮಂಡ್ಯ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸ್ವೀಪ್ ಐಕಾನ್, ನಟ ನಿನಾಸಂ ಸತೀಶ್ ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ನಟ ನೀನಾಸಂ ಸತೀಶ್ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಯೂತ್ಸ್ ಗಳಿಗೆ ಮತದಾನದ ಜಾಗೃತಿ ಮೂಡಿಸಿದ್ದಾರೆ. ಮಂಡ್ಯದಲ್ಲಿ 35 ಸಾವಿರ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಒಟ್ಟು 15 ಲಕ್ಷದ 24 ಸಾವಿರ ಮತದಾರರು ಮತದಾನದ ಪ್ರತಿಜ್ಞೆ ವಿಧಿ ಸ್ವೀಕಾರ ಮಾಡಿದ್ದಾರೆ. ಈ ವೇಳೆ ನೀನಾಸಂ ಸತೀಶ್, ಎಲ್ಲರೂ ವೋಟ್ ಹಾಕಿ ಪ್ರಶ್ನೆ ಮಾಡುವ ಹಕ್ಕು ಉಳಿಸಿಕೊಳ್ಳಿ ಎಂದು ಅಭಿಯಾನಕ್ಕೆ ಸಹಿ ಹಾಕಿ ಜಾಗೃತಿ ಮೂಡಿಸಿದ್ದಾರೆ.
ಇನ್ನು ನಟ ನಿನಾಸಂ ಸತೀಶ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕಾಲೇಜು ವಿದ್ಯಾರ್ಥಿಗಳು ಮುಗಿಬಿದ್ದಿದ್ದು, ಕಾರ್ಯಕ್ರಮದಲ್ಲಿ ಡಿಸಿ ಡಾ.ಹೆಚ್.ಎನ್.ಗೋಪಾಲಕೃಷ್ಣ, ಎಡಿಸಿ ನಾಗರಾಜ್, ಸಿಇಓ, ವಾರ್ತಾಧಿಕಾರಿ ನಿರ್ಮಲಾ ಸೇರಿ ಹಲವರು ಭಾಗಿಯಾಗಿದ್ದರು.
ರಾಕಿ ಮೀಟ್ಸ್ ರಾಧಿಕಾ: ಕೆಜಿಎಫ್ ಶೂಟಿಂಗ್ ನೆನಪು ಮೆಲುಕು ಹಾಕಿದ ರಾಧೆ..
‘ನಾನು ಈ ಜಾತಿಯಲ್ಲೇ ಹುಟ್ಟಿದ್ದು ತಪ್ಪಾಯ್ತಾ?’ : ಟಿಕೇಟ್ ಸಿಗದ ಕಾರಣ ಭಾವುಕರಾದ ಮೋಹನ್ ಕೃಷ್ಣ
ಜಗನ್ ಮೋಹನ್ ರೆಡ್ಡಿ ಪೋಸ್ಟರ್ ಹರಿದಿದ್ದಕ್ಕೆ ನಾಯಿ ವಿರುದ್ಧ ಕೇಸ್ ದಾಖಲು..!