Bollywood News: ಬಿಗ್‌ಬಾಸ್ ಹಿಂದಿ ಸೀಸನ್ 17ರಲ್ಲಿ ಟಿಆರ್‌ಪಿಗೆ ಕಾರಣರಾಗಿದ್ದ ದಂಪತಿ ಅಂದ್ರೆ, ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ, ಉದ್ಯಮಿ ವಿಕಿ ಜೈನ್.
ಇಬ್ಬರೂ ಪದೇ ಪದೇ ಜಗಳವಾಡಿಕೊಂಡು, ರೊಮ್ಯಾನ್ಸ್ ಮಾಡಿಕೊಂಡು, ಇತರ ಸ್ಪರ್ಧಿಗಳೊಂದಿಗೆ ಜಗಳವಾಡಿಕೊಂಡು ಬಿಗ್‌ಬಾಸ್ ಟಿಆರ್‌ಪಿ ಹೆಚ್ಚಾಗಲು ಕಾರಣರಾಗಿದ್ದರು. ವಿಕಿ ಇತರ ಸ್ಪರ್ಧಿಗಳೊಂದಿಗೆ ಫ್ಲರ್ಟ್ ಮಾಡುತ್ತಿದ್ದು, ಇದು ಕೂಡ ನೆಟ್ಟಿಗರ ಕೋಪಕ್ಕೆ, ಅಂಕಿತಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ, ಬಿಗ್‌ಬಾಸ್ ನಡೆಯುವಾಗ, ಅಂಕಿತಾ ಪದೇ ಪದೇ ತಾನು ಪ್ರೆಗ್ನೆಂಟ್ ಎಂದು ಹೇಳುತ್ತಿದ್ದಳು. ಆದರೆ ಅದು ಸುಳ್ಳು ಎಂದು ಹಲವು ದಿನಗಳ ಬಳಿಕ ಗೊತ್ತಾಗಿತ್ತು.
ಇನ್ನು ಅಭಿಮಾನಿಗಳ ಓಟ್ ಮುಖಾಂತರ ಅಂಕಿತಾ ಫಿನಾಲೆಗೆ ಬಂದ್ರೆ, ವಿಕಿ ಮಾತ್ರ ಫಿನಾಲೆ ವೀಕ್‌ನಲ್ಲಿ ಮನೆಗೆ ಹೋಗಿದ್ದರು. ಪತ್ನಿ ಇಲ್ಲದೇ, ಇತರ ನಟಿಯೊಂದಿಗೆ ತಮ್ಮ ಕೋಟಿ ಕೋಟಿ ಬೆಲೆ ಬಾಳುವ ಬಂಗಲೆಯಲ್ಲಿ ಪಾರ್ಟಿ ಮಾಡಿದ್ದರು. ಇದಕ್ಕೂ ವಿಕ್ಕಿ ಟ್ರೋಲ್ ಆಗಿದ್ದರು. ಇವನು ದೊಡ್ಡ ಫ್ಲರ್ಟಿ, ಅಂಕಿತಾ ಇವನಿಂದ ಡಿವೋರ್ಸ್ ತೆಗೆದುಕೊಳ್ಳುವುದು ಬೆಟರ್ ಎಂದಿದ್ದರು.
ಅಷ್ಟೇ ಅಲ್ಲದೇ, ಈ ದಂಪತಿ ಪದೇ ಪದೇ ಬಿಗ್‌ಬಾಸ್ ವೇದಿಕೆಯಲ್ಲಿ ದೂರವಾಗುವ ಬಗ್ಗೆ, ಡಿವೋರ್ಸ್ ತೆಗೆದುಕೊಳ್ಳುವ ಬಗ್ಗೆ ಜಗಳವಾಡುತ್ತಿದ್ದರು. ಆಗ ಹಲವರು, ಇವರಿಬ್ಬರು ದೂರವಾಗೋದು ನಿಜ ಅಂತಾನೇ ಹೇಳುತ್ತಿದ್ದರು. ಅಲ್ಲದೇ, ವಿಕ್ಕಿಗೆ ಪ್ರಶ್ನಿಸುತ್ತಿದ್ದ ಪಾಪರಾಜಿಗಳು, ನೀವಿಗ ಯಾರ ಜೊತೆ ಇದ್ದೀರಿ..? ನಿಮ್ಮ ಪತ್ನಿ ನಿಮ್ಮಿಂದ ಬೇರೆಯಾಗುತ್ತಿರುವುದು ನಿಜಾನಾ ಅಂತಾ ಪ್ರಶ್ನಿಸಿದ್ದರು. ಅದಕ್ಕೆ ಪ್ರಶ್ನಿಸಿದ್ದ ವಿಕ್ಕಿ, ನಾನು ನನ್ನ ಪತ್ನಿ ಅಂಕಿತಾಳೊಂದಿಗೆ ವಾಸಿಸುತ್ತಿದ್ದೇನೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಡಿವೋರ್ಸ್ ಅನ್ನೋದು ವದಂತಿ ಅಷ್ಟೇ. ನಾವು ದೂರವಾಗುತ್ತಿಲ್ಲವೆಂದು ಸ್ಪಷ್ಟನೆ ನೀಡಿದ್ದರು.
ಇದೀಗ ಅಂಕಿತಾ ತಮ್ಮ ಇನ್‌ಸ್ಟಾ ಗ್ರಾಮ್‌ನಲ್ಲಿ ಒಂದಿಷ್ಟು ಫೋಟೋ ಶೇರ್ ಮಾಡಿದ್ದು. ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ್ದಾರೆ. ಕೆಂಪು ಸೀರೆಯಲ್ಲಿ ಮಿಂಚಿರುವ ಅಂಕಿತಾ, ವಿಕ್ಕಿ ಜೊತೆ ರೊಮ್ಯಾಂಟಿಕ್ ಆಗಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಕ್ಯಾಪ್ಶನ್ ಕೊಟ್ಟಿರುವ ಅಂಕಿತಾ, ನಾವಿಬ್ಬರೂ ಪರಸ್ಪರ ಹೇಳಿಕೊಳ್ಳದಿದ್ದರೂ, ನಮಗದು ತಿಳಿದಿದೆ ಎಂದು ಹೇಳಿದ್ದಾರೆ.
ಕೆಲವರು ಈ ಪೋಟೋಗಳನ್ನು ನೋಡಿ, ಬಿಗ್‌ಬಾಸ್‌ನಲ್ಲಿ ಗೆಲ್ಲಲು, ಟಿಆರ್‌ಪಿ ಹೆಚ್ಚಿಸಲು ಇವರು ಡ್ರಾಮಾ ಆಡಿದ್ದರು ಎಂದು ಹೇಳಿದ್ದಾರೆ.