Movie News: ಹಿಂದಿಯ ನಾಗಿನ್ ಧಾರಾವಾಹಿ ಪ್ರಸಿದ್ಧ ಧಾರಾವಾಹಿ. ಏಕೆಂದರೆ, ಇದು ಬರೀ ಹಿಂದಿಯಲ್ಲಷ್ಟೇ ಪ್ರಸಾರವಾಗಿಲ್ಲ. ಕೊರೋನಾ ಸಮಯದಲ್ಲಿ ಹಲವು ಭಾಷೆಯಲ್ಲಿ ನಾಗಿನ್ ಧಾರಾವಾಹಿ ಡಬ್ ಆಗಿತ್ತು. ಇದೀಗ ಆ ಧಾರಾವಾಹಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ ನಟಿಸುತ್ತಿದ್ದಾರೆ.
ಈ ಹಿಂದೆ ಮೌನಿ ರಾಯ್, ಬಿಗ್‌ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಕೂಡ ನಾಗಿನಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದು ನಾಗಿನ್ 7ನೇ ಭಾಗವಾಗಿದ್ದು, ಇದನ್ನು ನಿರ್ಮಾಪಕಿ ಏಕ್ತಾಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಬಾರಿ ನಾಗಿನ್ 7ನೇ ಭಾಗಕ್ಕೆ ನಾಯಕಿಯಾಗಿ ಅಂಕಿತಾ ಲೋಖಂಡೆ ಬಣ್ಣ ಹಚ್ಚುತ್ತಿದ್ದಾರೆನ್ನಲಾಗಿದೆ.
ಇನ್ನು ಈಕೆ ನಾಗಿನ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಸುದ್ದಿಯಲ್ಲ. ಬದಲಾಗಿ ಈಕೆ ಆ ಧಾರಾವಾಹಿಯಲ್ಲಿ ಕೆಲಸ ಮಾಡಲು, ಒಂದು ಎಪಿಸೋಡ್‌ಗೆ ತೆಗೆದುಕೊಳ್ಳುತ್ತಿರುವ ಸಂಭಾವನೆಯೇ ಸುದ್ದಿ ಮಾಡುತ್ತಿದೆ. ಇಷ್ಟು ದಿನ ನಾಗಿನ್ ಪಾತ್ರ ಮಾಡಿದವರು, ಒಂದು ಎಪಿಸೋಡ್‌ಗೆ 60 ಸಾವಿರದಿಂದ 2 ಲಕ್ಷದವರೆಗೆ ಸಂಭಾವನೆ ಪಡೆಯುತ್ತಿದ್ದರು. ಈ ಬಾರಿ ಅಂಕಿತಾ 2ರಿಂ 3 ಲಕ್ಷದವರೆಗೂ, ಸಂಭಾವನೆ ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ಅದ್ದೂರಿಯಾಗಿ ನೆರವೇರಿತು “ರವಿಕೆ ಪ್ರಸಂಗ” ಚಿತ್ರದ ಪ್ರೀ ರಿಲೀಸ್ ಇವೆಂಟ್ .
ಸುಳ್ಳು ಸಾವಿನ ಸುದ್ದಿಯ ಪ್ರಚಾರ: ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲು