ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮನೆಗೆ ಬೆಂಕಿ

Bollywood News: ವಂಚನೆಯ ಕೇಸ್‌ನಲ್ಲಿ ಜೈಲು ಪಾಲಾಗಿರುವ ಸುಕೇಶ್‌ನ ಪ್ರೀತಿಯ ಬಲೆಗೆ ಬಿದ್ದಿದ್ದ ನಟಿ ಜಾಕ್ವೆಲಿನ್, ಈಗ ವಿಚಾರಣೆಗಾಗಿ ಕೋರ್ಟ್ ಅಲೆಯುವಂತಾಗಿದೆ. ಸುಕೇಶ್‌ನಿಂದ ಬೆಲೆಬಾಳುವ ಗಿಫ್ಟ್ ತೆಗೆದುಕೊಂಡಿದ್ದೇ, ಈ ಅಲೆದಾಟಕ್ಕೆ ಕಾರಣವಾಗಿದೆ. ಇದೀಗ ಈ ತಲೆಬಿಸಿಯ ಜೊತೆ ಇನ್ನೊ ಟೆನ್ಶನ್ ರಕ್ಕಮ್ಮನ ಪಾಲಾಗಿದೆ. ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದೆ.

ಮುಂಬೈನಲ್ಲಿರುವ ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಈಕೆ ಉಳಿದುಕೊಂಡಿರುವ ಅಪಾರ್ಟ್‌ಮೆಂಟ್‌ನ 14ನೇ ಮಹಡಿಗೆ ಬೆಂಕಿ ಬಿದ್ದಿದ್ದು, 15ನೇ ಮಹಡಿಯಲ್ಲಿರುವ ಜಾಕ್ವೆಲಿನ್ ಮನೆಗೂ ಬೆಂಕಿ ಪಸರಿಸಿದೆ. ಆದರೆ ನಟಿ ಶೂಟಿಂಗ್‌ಗಾಗಿ ದುಬೈ ಪ್ರಯಾಣದಲ್ಲಿದ್ದು, ಈ ಮೂಲಕ ಸೇಫ್ ಆಗಿದ್ದಾರೆ.

ಇನ್ನು ಹೀಗೆ ಬೆಂಕಿ ಬೀಳಲು ಕಾರಣವೇನು ಅನ್ನೋದು ಇನ್ನೂ ಗೊತ್ತಾಗಬೇಕಿದೆ ಅಷ್ಟೇ.

ನಟಿ ಕಾಜಲ್ ಅಗರ್ವಾಲ್ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿ: ನೆಟ್ಟಿಗರ ಆಕ್ರೋಶ

ಡಿವೋರ್ಸ್ ವದಂತಿಗೆ ಸ್ಪಷ್ಟನೆ ನೀಡಿದ ನಟಿ ನಯನ ತಾರಾ

ಅಯೋಧ್ಯೆಗೆ ಭೇಟಿ ನೀಡಿ, ಬಾಲರಾಮನ ದರ್ಶನ ಪಡೆದ ನಟ ರಕ್ಷಿತ್ ಶೆಟ್ಟಿ

About The Author