Bollywood News: ಬಾಲಿವುಡ್ ನಟಿ, ದಿವಂಗತ ಶ್ರೀದೇವಿ ಮಗಳಾದ ಜಾನ್ವಿ ಕಪೂರ್ಗೆ ಈಗ ಸಾಲು ಸಾಲು ಸಿನಿಮಾಗಳು ಕೈಯಲ್ಲಿದೆ. ಸಿನಿಮಾ ವಿಷಯಕ್ಕೆ ಮಾತ್ರವಲ್ಲದೇ, ಜಾನ್ವಿ ಬಾಯ್ಫ್ರೆಂಡ್ ವಿಷಯಕ್ಕೂ ಸುದ್ದಿಯಾಗುತ್ತಿದ್ದಾರೆ.
ಜಾನ್ವಿ ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ರಾಜಕೀಯ ಮನೆತನಕ್ಕೆ ಸೇರಿದವರಾಗಿದ್ದು, ಈಗಾಗಲೇ ಇವರಿಬ್ಬರ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಜಾನ್ವಿ ಕಪೂರ್ ಕೂಡ ಶಿಖರ್ ಜೊತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಶಿಖರ್ ಜೊತೆನೇ ತಮ್ಮ ಮದುವೆ ಅಂತಾ ಜಾನ್ವಿ ಕಪೂರ್ ಈಗಾಗಲೇ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ಕಾರ್ಯಕ್ರಮದಲ್ಲಿ ಜಾನ್ವಿ ಶಿಖರ್ ಅನ್ನೋ ಹೆಸರು ಇರುವ ನೆಕ್ಲೆಸ್ ಧರಿಸಿ, ತಮ್ಮ ಮತ್ತು ಶಿಖರ್ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ. ಈ ಹಾರದಲ್ಲಿ ಶಿಖು ಅಂತಾ ಬರೆದಿದೆ. ಇನ್ನು ಶಿಖರ್ ಮತ್ತು ಜಾನ್ವಿ ಬಾಲ್ಯದ ಗೆಳೆಯರಾಗಿದ್ದು, ಗೆಳೆತನ ಪ್ರೀತಿಗೆ ತಿರುಗಿ, ಇದೀಗ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಶಿಖರ್ ಮತ್ತು ಓರಿ ಜೊತೆ ಜಾನ್ವಿ ತಿರುಪತಿಗೆ ಹೋಗಿದ್ದರು. ಆಗ ತಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ 50ಕ್ಕೂ ಹೆಚ್ಚು ಬಾರಿ ತಿರುಪತಿಗೆ ಹೋಗಿದ್ದೇನೆ. ಅದು ನನ್ನ ಇಷ್ಟ ದೇವರು ಅಂತಾ ಜಾನ್ವಿ ಹೇಳಿದ್ದರು. ಅಲ್ಲದೇ, ಮೊನ್ನೆ ತಿರುಪತಿಗೆ ಹೋದಾಗ, ಮಂಡಿಯಲ್ಲಿ ತಿರುಪತಿ ಮೆಟ್ಟಿಲು ಹತ್ತಿ, ತಿರುಪತಿ ದರ್ಶನ ಮಾಡಿದ್ದಾರೆ. ಎರಡು ವರ್ಷದ ಹಿಂದೆ ನೀಡಿದ್ದ ಸಂದರ್ಶನದಲ್ಲಿ, ತಾನು ತಿರುಪತಿಯಲ್ಲಿಯೇ ವಿವಾಹವಾಗಬೇಕು ಎಂದುಕೊಂಡಿದ್ದೇನೆ ಅಂತಲೂ ಹೇಳಿದ್ದರು.
ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ
ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ
ನಾನು 9 ತಿಂಗಳು ಜೈಲಿನಲ್ಲಿದ್ದಾಗ, ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ: ಜೋಶಿ ವಿರುದ್ಧ ವಿನಯ್ ಆರೋಪ