Movie News: ನಟಿ ಕಂಗನಾ ರಾಣಾವತ್ ಇಂದಿರಾಗಾಂಧಿ ಪಾತ್ರದಲ್ಲಿ ಮಿಂಚಿರುವ ಚಿತ್ರ ಎಮರ್ಜೆನ್ಸಿ. ಈ ಸಿನಿಮಾ ಕಳೆದ ವರ್ಷ ನವೆಂಬರ್‌ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಆ ಸಮಯದಲ್ಲಿ ಹಲವು ಸಿನಿಮಾ ರಿಲೀಸ್ ಆದ ಕಾರಣ, ಎಮರ್ಜೆನ್ಸಿ ಸಿನಿಮಾವನ್ನು 2024ರಲ್ಲಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ಸಿನಿಮಾ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಇದೇ ವರ್ಷ ಜೂನ್ 14ರಂದು ಸಿನಿಮಾ ರಿಲೀಸ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದಿರಾಗಾಂಧಿ ಸರ್ಕಾರವಿದ್ದಾಗ, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಆ ವೇಳೆಯಲ್ಲಿ ಏನೇನಾಗಿತ್ತು ಎಂದು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಕಂಗನಾ, ಇಂದಿರಾಗಾಂಧಿ ಪಾತ್ರಕ್ಕೆ ಬಣ್ಣ ತುಂಬಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಕಂಗನಾ ಬರೀ ನಟಿಯ ಪಾತ್ರ ಮಾಡಲಿಲ್ಲ. ಬದಲಾಗಿ ನಿರ್ಮಾಪಕಿ, ನಿರ್ದೇಶಕಿಯ ಕಾರ್ಯ ನಿರ್ವಹಿಸಿದ್ದಾರೆ.
ಹಾಗಾಗಿ ಅವರ ಆಸ್ತಿ ಅಡವು ಇಡುವ ಸಂದರ್ಭ ಕೂಡ ಬಂದಿತ್ತೆಂದು ಅವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಅಲ್ಲದೇ, ಈ ಸಿನಿಮಾದಿಂದ ಜವಾಬ್ದಾರಿ ಹೆಚ್ಚಾಗಿದ್ದು, ಇದರಲ್ಲಿ ನನ್ನ ಅಳಿವು ಉಳಿವಿನ ಪರಿಸ್ಥಿತಿ ಇದೆ. ಹಾಗಾಗಿ ಈ ಸಿನಿಮಾ ರಿಲೀಸ್ ಆಗುವ ದಿನ ನನಗೆ ತುಂಬಾ ಮುಖ್ಯವಾಗಿದೆ. ಹಾಗಾಗಿ 2024ರ ಜೂನ್ 14ರಂದು ಈ ಸಿನಿಮಾ ರಿಲೀಸ್ ಮಾಡಲು ನಿರ್ಧಿರಿಸಿದ್ದೇನೆ ಎಂದು ಕಂಗನಾ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ನಟ ನಿಖಿಲ್ ಕುಮಾರ್
ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ತನ್ನ ಮನೆಯಲ್ಲಿ ಹೋಮ ನಡೆಸಿದ ನಟಿ ಊರ್ಫಿ ಜಾವೇದ್
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾಗೌಡ