Saturday, May 25, 2024

Latest Posts

ಟಾಕ್ಸಿಕ್ ಚಿತ್ರದಲ್ಲಿ ಯಶ್ ಸಹೋದರಿಯ ಪಾತ್ರ ನಿರ್ವಹಿಸಲಿದ್ದಾರೆ ನಟಿ ಕರೀನಾ..

- Advertisement -

Movie News: ಹಲವು ದಿನಗಳಿಂದ ಟಾಕ್ಸಿಕ್ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಯಶ್ ಜೊತೆ ನಟಿಸಲಿದ್ದಾರೆಂದು ಹೇಳಲಾಗುತ್ತಿತ್ತು. ಅಲ್ಲದೇ ಕರೀನಾ ಕೂಡ ಯಶ್ ಜೊತೆ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಅದೇ ನನ್ನ ಜೀವಮಾನ ಸಾಧನೆ ಅಂತಲೂ ಹೇಳಿದ್ದರು. ಇದೀಗ ಯಶ್ ಮತ್ತು ಕರೀನಾ ಒಟ್ಟಿಗೆ ಸೇರಿ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಆದರೆ ಕರೀನಾ ಯಶ್ ಸಹೋದರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಈಗಾಗಲೇ ಟಾಕ್ಸಿಕ್ ಸನಿಮಾ ಶೂಟಿಂಗ್ ಶುರುವಾಗಿದ್ದು, ಯಶ್ ಸೇರಿ ಚಿತ್ರತಂಡ ಗೋವಾದಲ್ಲಿ ಬೀಡು ಬಿಟ್ಟಿದೆ. ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದು, ಅವರು ಶೂಟಿಂಗ್ ಸಮಯದಲ್ಲಿ ಯಶ್ ಜೊತೆ ನಡೆಯುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಲ್ಲದೇ ಯಶ್ ನಿನ್ನೆಯಷ್ಟೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಕೆಲವೇ ದಿನಗಳಲ್ಲಿ ಏನೋ ಸುದ್ದಿ ಕೊಡಲಿದ್ದಾರೆಂಬ ಹಿಂಟ್ ಕೊಟ್ಟಿದ್ದಾರೆ. ಒಟ್ಟಾರೆಯಾಗಿ, ಯಾವಾಗ ಯಶ್ ಸಿನಿಮಾ ರಿಲೀಸ್ ಆಗತ್ತೋ, ಕೆಜಿಎಫ್ 3 ಅಥವಾ ಟಾಕ್ಸಿಕ್ ಸಿನಿಮಾ ಯಾವಾಗ ರಿಲೀಸ್ ಆಗತ್ತೋ ಅಂತಾ ಅಭಿಮಾನಿಗಳು ಕಾಯ್ತಾ ಇರೋದಂತೂ ಸುಳ್ಳಲ್ಲ.

ಮದುವೆಯಾಗಿಲ್ಲ.. ಎಂಗೇಜ್‌ಮೆಂಟ್ ಅಷ್ಟೇ ಆಗಿದ್ದು ಎಂದು ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ಹೈದರಿ

ವೀರ್ ಸಾವರ್ಕರ್ ಚಿತ್ರದಲ್ಲಿ ನಟಿಸಲು ಸಂಭಾವನೆಯೇ ಪಡೆದಿಲ್ಲವಂತೆ ನಟಿ ಅಂಕಿತಾ..

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss