Saturday, July 27, 2024

Latest Posts

ಮದುವೆಯಾಗಿಲ್ಲ.. ಎಂಗೇಜ್‌ಮೆಂಟ್ ಅಷ್ಟೇ ಆಗಿದ್ದು ಎಂದು ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ಹೈದರಿ

- Advertisement -

Movie News: ನಿನ್ನೆಯಷ್ಟೇ ತೆಲಂಗಾಣಾದ ದೇವಸ್ಥಾನವೊಂದರಲ್ಲಿ ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ ವಿವಾಹವಾದರು ಅಂತಾ ಸುದ್ದಿಯಾಗಿತ್ತು. ಎಲ್ಲರೂ ಇದೇ ರೀತಿ ಸುದ್ದಿ ಹಬ್ಬಿಸುವುತ್ತಿರುವುದನ್ನು ಕಂಡ ನಟಿ ಅದಿತಿ, ಇಂಜು ತಾವು ವಿವಾಹವಾಗಿಲ್ಲ. ಎಂಗೇಜ್‌ಮೆಂಟ್ ಅಷ್ಟೇ ಆಗಿರುವುದು ಎಂದಿದ್ದಾರೆ.

ಹಿ ಸೇಡ್ ಎಸ್… ಎಂಗೇಜ್ಡ್ ಎಂದು ಹೇಳಿರುವ ಅದಿತಿ, ತಾವು ಮತ್ತು ಸಿದ್ಧಾರ್ಥ್ ಎಂಗೇಜ್‌ಮೆಂಟ್ ರಿಂಗ್ ತೊಟ್ಟಿರುವ ಫೋಟೋ ಹಾಕಿದ್ದಾರೆ. ಈ ಮೂಲಕ ಬರೀ ಎಂಗೇಜ್‌ಮೆಂಟ್ ಆಗಿದ್ದೇವೆ. ಮದುವೆ ಇನ್ನೂ ಬಾಕಿ ಇದೆ ಅಂತಾ ನಟಿ ಅದಿತಿ ಹೇಳಿದ್ದಾರೆ.

ಸಿದ್ಧಾರ್ಥ ಮತ್ತು ಅದಿತಿಗೆ ಇದು ಎರಡನೇಯ ಸಂಬಂಧವಾಗಿದೆ. ಇವರಿಬ್ಬರರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಲೀವ್ ಇನ್ ರಿಲೆಶನ್‌ಶಿಪ್‌ನಲ್ಲಿದ್ದರು. 2021ರಲ್ಲಿ ಮಹಾಸಮುದ್ರಂ ಸಿನಿಮಾ ಶೂಟಿಂಗ್ ವೇಳೆ ಇಬ್ಬರು ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಇವರಿಬ್ಬರು ಎಂಗೇಜ್‌ ಆಗಿದ್ದಾರೆ.

ಸಿದ್ಧಾರ್ಥ 2003ರಲ್ಲಿ ಗೆಳತಿ ಮೇಘನಾ ಜೊತೆ ಮದುವೆಯಾಗಿದ್ದರು. ಬಳಿಕ ಸಿದ್ಧಾರ್ಥ್ ಕಮಲ್ ಹಾಸನ್ ಮಗಳು ಶೃತಿ ಹಾಸನ್ ಜೊತೆ ಅಫೇರ್ ಇದೆ ಎಂಬ ಸುದ್ದಿ ಹರಿದಾಡಿತ್ತು. ಬಳಿಕ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡಿದ್ದು, ಮೇಘನಾ ಜೊತೆ ಕೂಡ ಸಿದ್ಧಾರ್ಥ್ ಡಿವೋರ್ಸ್‌ ಪಡೆದುಕೊಂಡರು. ಇನ್ನು ಅದಿತಿ ಕೂಡ ವಕೀಲ ಸತ್ಯದೀಪ್‌ ಮಿಶ್ರಾ ಜೊತೆ ವಿವಾಹವಾಗಿದ್ದರು. ಇವರ ವೈವಾಹಿಕ ಜೀವನ ಸರಿ ಇಲ್ಲದ ಕಾರಣ, ಇವರು ಕೂಡ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಸಿದ್ಧಾರ್ಥ್ ಮತ್ತು ಅದಿತಿ ಸಂಬಂಧದಲ್ಲಿದ್ದಾರೆ.

ಬೆಂಗಳೂರಿನ ನೀರಿನ ಸಮಸ್ಯೆಗೆ ಕನ್ನಡದಲ್ಲೇ ಪರಿಹಾರ ತಿಳಿಸಿದ ಮೆಗಾಸ್ಟಾರ್ ಚಿರಂಜೀವಿ

ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕಂಗನಾ ರಾಣಾವತ್

ಬಾಲಿವುಡ್‌ ಬೆಡಗಿ ಕಂಗನಾಗೆ ಬಿಜೆಪಿ ಟಿಕೇಟ್ ಘೋಷಣೆ: ಮಂಡಿ ಕ್ಷೇತ್ರದಿಂದ ಸ್ಪರ್ಧೆ..

- Advertisement -

Latest Posts

Don't Miss