Wednesday, September 17, 2025

Latest Posts

‘ಮದ್ವೆ ಆದ್ರೆ ಯಶ್‌ ಅವ್ರನ್ನೇ ಅಂತಾ ಡಿಸೈಡ್ ಮಾಡಿದ್ದೆ’

- Advertisement -

ನಟಿ ಲಾಸ್ಯಾ ನಾಗರಾಜ್ ತಮ್ಮ ಸಿನಿ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅವಕಾಶಗಳ ಬಗ್ಗೆ ಮಾತನಾಡಿದ ಲಾಸ್ಯಾ, ಸಿನಿಮಾ ಮಾಡಿದ್ರೆ, ಅದು ಅರ್ಥಪೂರ್ಣವಾಗಿರಬೇಕು. ದೃಶ್ಯಂ ಸಿನಿಮಾದಲ್ಲಿ ನಟಿಸಿದ ಬಳಿಕ, ಅದ್ಭುತ ನಟನೆ ಎಂದರೇನು ಅಂತಾ ನನಗೆ ಅರ್ಥವಾಯಿತು. ಹಾಗಾಗಿ ಅಂಥ ಪಾರ್ಟ್‌ಗಳು ಸಿಕ್ರೆ ಖಂಡಿತ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಅಲ್ಲದೇ, ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಯಾವ ನಟನ ಜೊತೆ ನಟಿಸುವ ಅವಕಾಶ ಸಿಕ್ರೆ ನಟಿಸ್ತೀರಾ ಅಂತಾ ಕೇಳಿದ್ದಕ್ಕೆ, ಶಿವರಾಜ್‌ಕುಮಾರ್ ಅಂತಾ ಲಾಸ್ಯಾ ಖುಷಿಯಿಂದಲೇ ಉತ್ತರಿಸಿದ್ದಾರೆ. ಅಲ್ಲದೇ ಯಶ್ ಕೂಡ ನನಗಿಷ್ಟ. ಮೊಗ್ಗಿನ ಮನಸ್ಸು ಸಿನಿಮಾ ಬಂದಾಗಿಂದಲೂ ನನಗೆ ಅವರಿಷ್ಟ. ಅವರು ಚಾಕೋಲೇಟ್ ಬಾಯ್ ಇದ್ದಂಗೆ ಇದ್ದರು. ಆಗ ನಾನು 8ನೇ ಕ್ಲಾಸಿನಲ್ಲಿ ಇದ್ದೆ. ಮದುವೆ ಆದ್ರೆ ಇವರನ್ನೇ ಮದ್ವೆ ಆಗ್ಬೇಕು ಅಂತಿದ್ದೆ ಅಂತಾರೆ ಲಾಸ್ಯಾ.

ಇನ್ನು ಯಶ್- ರಾಧಿಕಾ ಮದುವೆಯಾದಾಗ, ಲಾಸ್ಯಾಗೆ ತುಂಬಾ ಬೇಜಾರಾಗಿತ್ತಂತೆ. ಆದ್ರೆ ರಾದಿಕಾ ಪಂಡಿತ್ ಅಂದ್ರೆ ಕೂಡ ನನಗೆ ತುಂಬಾ ಇಷ್ಟ ಅಂತಾ ಲಾಸ್ಯಾ ಖುಷಿಯಾಗಿಯೇ ಹೇಳಿದ್ದಾರೆ. ಅಲ್ಲದೇ ಯಶ್ ತುಂಬಾ ಹಾರ್ಡ್ ವರ್ಕ್ ಮಾಡಿ, ಈ ಲೆವಲ್‌ಗೆ ಬಂದಿದ್ದಾರೆ. ಸಿರಿಯಲ್ ನಟರಾಗಿದ್ದವರು, ಈಗ ಪ್ರಪಂಚವೇ ಗುರುತಿಸುವ ಮಟ್ಟಕ್ಕೆ ಬಂದಿದ್ದಾರೆ ಅಂತಾ ಲಾಸ್ಯಾ ಹೇಳಿದ್ದಾರೆ.

- Advertisement -

Latest Posts

Don't Miss