ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ಬಳಸೋ ಬ್ಯೂಟಿ ಟಿಪ್ಸ್ ಕೊಡ ಕೊಟ್ಟಿದ್ದರು. ಇಂದು ಅವರು ತಮ್ಮ ಡೇಲಿ ರೂಟಿನ್ ಬಗ್ಗೆ ಮಾತನಾಡಿದ್ದಾರೆ.
ಲಾಸ್ಯಾ ನಾಗರಾಜ್ ಶೂಟಿಂಗ್ ಇದ್ದ ದಿನ ಮತ್ತು ಶೂಟಿಂಗ್ ಇರದ ದಿನ ಹೇಗಿರ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಶೂಟಿಂಗ್ ಇರದ ದಿನ ಲಾಸ್ಯಾ, ಬೆಳಿಗ್ಗೆ 6 ಗಂಟೆಗೆ ಎದ್ದು ಬೇರೆ ಬೇರೆ ವರ್ಕೌಟ್ ಮಾಡ್ತಾರಂತೆ. ನಂತರ ಫ್ರೆಶ್‌ಅಪ್ ಆಗಿ, ಟೀ ಕುಡಿತಾ ತಮ್ಮಿಷ್ಟದ ಮ್ಯೂಸಿಕ್ ಕೇಳ್ತಾರೆ. ಇದಾದ ಬಳಿಕ 30 ನಿಮಿಷ ತಮ್ಮಿಷ್ಟದ ನ್ಯೂಸ್ ರೀಡ್ ಮಾಡ್ತಾರೆ.
ಇನ್ನು ಇದರ ಬಳಿಕ ಇಂದು ಯಾವ ಯಾವ ಕೆಲಸ ಮಾಡ್ಬೇಕು ಅನ್ನೋದನ್ನ ನಿರ್ಧಾರ ಮಾಡ್ತಾರಂತೆ ಲಾಸ್ಯಾ. ಇದಾದ ಬಳಿಕ ತಿಂಡಿ ತಿನ್ನೋ ಟೈಮ್. ಲಾಸ್ಯಾ ತಿಂಡಿ ಬಗ್ಗೆ ಒಂದು ಟಿಪ್ಸ್ ಕೊಟ್ಟಿದ್ದಾರೆ. ಅದೇನಂದ್ರೆ, ನಮಗೆ ಹಸಿವಾದಾಗ ಮಾತ್ರ ನಾವು ಊಟ ತಿಂಡಿ ತಿನ್ನಬೇಕು, ಒತ್ತಾಯ ಪೂರ್ವಕವಾಗಿ ತಿನ್ನಬಾರದು. ಇನ್ನು ಮದ್ಯಾಹ್ನ ಮೊಟ್ಟೆ, ತರಕಾರಿ ಚಪಾತಿ ತಿಂತಾರೆ. ಇದಾದ ಬಳಿಕ 6 ಗಂಟೆಯ ತನಕ ಲಾಸ್ಯಾ ಏನೂ ತಿನ್ನೋದಿಲ್ಲ. ನಂತರ 6 ಗಂಟೆಗೆ ಕೊನೆಯ ಮೀಲ್ ತೆಗೆದುಕೊಳ್ತಾರೆ.
ಇನ್ನು ಶೂಟಿಂಗ್ ಇದ್ದಾಗ, 20 ನಿಮಿಷವಾದ್ರೂ ವರ್ಕೌಟ್ ಮಾಡಿ, ಇದಾದ ಬಳಿಕ ತಿಂಡಿ ತಿಂದು ಶೂಟಿಂಗ್‌ಗೆ ಹೊರಡ್ತಾರೆ. ಸಂಜೆ ಶೂಟಿಂಗ್ ಮುಗಿದ ಬಳಿಕ, ಫ್ರೆಂಡ್ಸ್, ರಿಲೆಟಿವ್ಸ್ ಮೀಟ್ ಮಾಡ್ಬೇಕು ಅನ್ಸಿದ್ರೆ, ಮೀಟ್ ಮಾಡ್ತಾರೆ. ಇನ್ನು ಪ್ರತಿದಿನ ಯಾವುದಾದರೂ ಒಂದು ಮೂವಿ ನೋಡೋದು ಲಾಸ್ಯಾ ಹಾಬಿ ಅಂತೆ.