Sunday, July 6, 2025

Latest Posts

‘ಐಟಂ ಸಾಂಗ್ ಮಾಡಿದಾಗ ಕೆಟ್ಟದಾಗಿ ಕಾಮೆಂಟ್ಸ್ ಬರ್ತಿತ್ತು’

- Advertisement -

ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ, ತಾನು ಆ್ಯಂಕರ್ ಆಗ್ಬೇಕಿತ್ತು ಆದ್ರೆ ಆ್ಯಕ್ಟರ್ ಆದೆ ಅನ್ನೋ ಬಗ್ಗೆ, ಅಲ್ಲದೇ, ತಾವು ಬಳಸೋ ಬ್ಯೂಟಿ ಟಿಪ್ಸ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಾವು ಐಟಂ ಸಾಂಗ್ ಮಾಡಿದಾಗ, ಯಾವ ರೀತಿಯ ರಿಪ್ಲೈ ಬಂತು ಅನ್ನೋ ಬಗ್ಗೆ ಮಾತನಾಡಿದ್ದಾರೆ.

ನನಗೆ ಸಿನಿಮಾ ನಟ ನಟಿಯರು ಹೆಚ್ಚಾಗಿ ಸ್ನೇಹಿತರಿಲ್ಲ, ನಾನು ಡೈರೆಕ್ಟರ್ಸ್ ಜೊತೆ ಮಾತಾಡ್ತಿರ್ತೀನಿ. ಅವರ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು..? ಅವರು ಯಾವ ಕಥೆಯಲ್ಲಿ ಬ್ಯೂಸಿ ಇದ್ದಾರೆ ಅನ್ನೋ ಬಗ್ಗೆ ಮಾತಾಡ್ತೀನಿ ಅೞತಾ ಹೇಳಿದ ನಟಿ ಲಾಸ್ಯಾ ನಾಗರಾಜ್ ತಾವು ಕೂಡ ಒಂದು ಆಲ್ಬಂ ಸಾಂಗ್ ಡೈರೆಕ್ಟ್ ಮಾಡಿದ್ದೀನಿ ಅಂತಾ ಹೇಳಿದ್ರು. ಈ ಸಾಂಗ್‌ನಲ್ಲಿ ಅವರೇ ಡಾನ್ಸ್ ಮಾಡಿದ್ದಾರಂತೆ.

ಇನ್ನು ಐಟಂ ಸಾಂಗ್‌ ಬಗ್ಗೆ ಮಾತನಾಡಿದ ಲಾಸ್ಯಾ ನಾಗರಾಜ್, ನಾನು ಐಟಂ ಸಾಂಗ್ ಮಾಡಿದಾಗ, ಸುಮಾರು ಜನ ಅದಕ್ಕೆ ಬ್ಯಾಡ್ ಕಾಮೆಂಟ್ ಮಾಡಿದ್ರು. ಈ ಡಾನ್ಸ್ ನೀನು ಮಾಡಬಾರ್ದಿತ್ತು ಅಂತಾ ಸುಮಾರು ಜನ ಹೇಳಿದ್ರು. ಅಲ್ಲದೇ ನನಗೆ ಐಟಂ ಡಾನ್ಸ್ ಮಾಡಕ್ಕಷ್ಟೇ ಕಾಲ್ ಬರಕ್ಕೆ ಶುರುವಾಯ್ತು. ನನಗೆ ಇದೇ ಇಷ್ಟ ಆಗೋದಿಲ್ಲಾ ಎಂದಿದ್ದಾರೆ.

ಒಬ್ಬರು ಒಂದು ರೀತಿಯ ನಟನೆ ಅಥವಾ ನೃತ್ಯ ಮಾಡಿದಾಗ, ನೀವು ಅವರನ್ನ ಅದಕ್ಕೆ ಸೀಮಿತಗೊಳಿಸಿಬಿಡ್ತೀರಿ. ಅದು ತಪ್ಪು ನೀವು ಒಬ್ಬರ ಟ್ಯಾಲೆಂಟ್‌ನ ಒಂದೇ ಡಬ್ಬಿಯಲ್ಲಿ ತುಂಬಿಸಿಇಡೋಕ್ಕೆ ಆಗಲ್ಲ. ಒಬ್ಬ ಆ್ಯಕ್ಟರ್ ಅಂದಮೇಲೆ ಅವನಿಗೆ ಎಲ್ಲ ರೀತಿಯ ನೃತ್ಯ, ನಟನೆ ಮಾಡೋಕ್ಕೆ ಬರಬೇಕು ಅಂತಾ ಲಾಸ್ಯಾ ನಾಗರಾಜ್ ಹೇಳಿದ್ದಾರೆ.

- Advertisement -

Latest Posts

Don't Miss