Sunday, July 6, 2025

Latest Posts

‘ನನ್ನನ್ನು ಮದುವೆಯಾಗುವ ಹುಡುಗನಲ್ಲಿ ಈ ಕ್ವಾಲಿಟೀಸ್ ಇರ್ಬೇಕು’

- Advertisement -

ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ, ತಾನು ಆ್ಯಂಕರ್ ಆಗ್ಬೇಕಿತ್ತು ಆದ್ರೆ ಆ್ಯಕ್ಟರ್ ಆದೆ ಅನ್ನೋ ಬಗ್ಗೆ, ಅಲ್ಲದೇ, ತಾವು ಬಳಸೋ ಬ್ಯೂಟಿ ಟಿಪ್ಸ್ ಬಗ್ಗೆ ಮಾತನಾಡಿದ್ದಾರೆ. ಅದೇ ರೀತಿ ಇಂದು ಲಾಸ್ಯಾ ತಾನು ಮದುವೆಯಾಗುವ ಹುಡುಗನಿಗೆ ಯಾವ ಕ್ವಾಲಿಟಿ ಇರಬೇಕು ಅನ್ನೋ ಬಗ್ಗೆ ಮಾತನಾಡಿದ್ದಾರೆ.

ಲಾಸ್ಯಾಗೆ ಸಣ್ಣದಿಂದಲೂ ಒಂದು ಆಸೆ ಇತ್ತಂತೆ. ಏನಂದ್ರೆ ತಾನು ಮದುವೆಯಾಗುವ ಹುಡುಗನಿಗೆ ಒಂದು ಸೂಪರ್ ಬೈಕ್ ಇರ್ಬೇಕು ಅಂತಾ. ಈಗಲೂ ಕೂಡ ಇದೇ ಆಸೆ ಇದೆ. ಅಲ್ಲದೇ, ತಾನು ಮದುವೆಯಾಗುವ ಹುಡುಗ ಫಿಟ್ ಆಗಿರಬೇಕು. ನಾನು ಮತ್ತು ಅವನು ಸೇರಿ ಪವರ್ ಕಪಲ್ ರೀತಿ ಜಿಮ್‌ ಮಾಡ್ಬೇಕು. ನಾನು ಅವನು ಸೇರಿ ಬೇರೆ ಬೇರೆ ದೇಶಗಳನ್ನು ಸುತ್ತಬೇಕು. ನಿಮ್ಮಲ್ಲಿ ಯಾರಿಗಾದ್ರೂ ಈ ಮೂರು ಕ್ವಾಲಿಟೀಸ್ ಇದ್ರೆ ನನ್ನನ್ನು ಮೀಟ್ ಮಾಡಿ ಅಂತಾ ಲಾಸ್ಯಾ ತಮಾಷೆ ಮಾಡಿದ್ದಾರೆ.

ಇದಲ್ಲೆದಕ್ಕಿಂತ ಮಿಗಿಲಾಗಿ ಆ ಹುಡುಗ ಪ್ರತೀ ಹೆಣ್ಣು ಮಕ್ಕಳಿಗೂ ಗೌರವ ನೀಡಬೇಕು. ತಮ್ಮ ಮನೆ ಹೆಣ್ಣು ಮಕ್ಕಳಿಗಷ್ಟೇ ಗೌರವ ಕೊಟ್ಟು, ಬೇರೆಯವರಿಗೆ ನೀಡದೇ ಇರಬಾರದು. ಅಲ್ಲದೇ ನಾನು ಅವನಿಗೆ ಫ್ರೀಡಮ್‌ ನೀಡುತ್ತೇನೆ. ಅದೇ ರೀತಿ ಅವನು ಕೂಡ ನನಗೆ ಫ್ರೀಡಂ ನೀಡಬೇಕು. ಏನು ಮಾಡ್ತಿದ್ದೀಯಾ..? ಎಲ್ಲಿ ಹೋಗ್ತಿದ್ದೀಯಾ..? ಇದೆಲ್ಲಾ ಯಾಕೆ ಮಾಡ್ತೀಯಾ..? ಈ ರೀತಿಯೆಲ್ಲ ಪ್ರಶ್ನೆ ಕೇಳಿ, ನನ್ನ ಜೀವನದಲ್ಲಿ ಹೆಚ್ಚು ರಿಸ್ಟ್ರಿಕ್ಷನ್ ಇಡಬಾರದು ಅಂತಾ ಲಾಸ್ಯಾ ಹೇಳಿದ್ದಾರೆ.

- Advertisement -

Latest Posts

Don't Miss