Friday, July 4, 2025

Latest Posts

ತನ್ನ ದೇಹದ ಬಗ್ಗೆ ಕಾಮೆಂಟ್ ಮಾಡುವವರಿಗೆ ಖಡಕ್ ಉತ್ತರ ನೀಡಿದ ನಟಿ ನೀತು..

- Advertisement -

ನಟಿ ನೀತು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಬಗ್ಗೆ ಕಾಮೆಂಟ್ ಮಾಡಿದವರಿಗೆ ಖಡಕ್ಕಾಗಿಯೇ ಜವಾಬ್ ನೀಡಿದ್ದಾರೆ. ಆದರೂ ಕೂಡ, ಕೆಲ ಕಾಮೆಂಟ್‌ಗಳು ಅವರಿಗೆ ನೋವು ನೀಡಿದ್ದು, ಈ ಬಗ್ಗೆ ಸ್ವತಃ ನೀತು ಮಾತನಾಡಿದ್ದಾರೆ.

ಕೆಲವರಿಗೆ ದಪ್ಪ ಇದ್ರೆ, ಅವರಿಗೆ ಆರೋಗ್ಯ ಸರಿ ಇಲ್ಲಾ. ಅವರು ಸೋಂಬೇರಿಗಳು. ಅವರ ಪ್ರಕಾರ ತೆಳ್ಳಗಿರುವವರೆಲ್ಲ ಫಿಟ್ ಆ್ಯಂಡ್ ಫೈನ್. ಆದ್ರೆ ನಿಜವಾಗ್ಲು ತೆಳ್ಳಗಿರುವವರಲ್ಲಿ ಸ್ಟ್ರೆಸ್ ಇರುತ್ತದೆ. ಇನ್ನು ನಾನು ಹಾಕೋ ಬಟ್ಟೆಗೂ ಜನ ಕಾಮೆಂಟ್ ಮಾಡ್ತಾರೆ. ನೀನು ದಪ್ಪ ಇದಿಯಾ, ಈ ಥರಾ ಬಟ್ಟೆ ಯಾಕ್ ಹಾಕ್ತೀಯಾ. ಸರಿಯಾಗಿ ಮೈ ಮುಚ್ಚಿಕೊಂಡಿರು ಅಂತೆಲ್ಲಾ ಕಾಮೆಂಟ್ ಮಾಡ್ತಾರೆ ಅಂತಾ ನೀತು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ ಇದನ್ನೆಲ್ಲ ಹೇಳೋಕ್ಕೆ ನೀವ್ಯಾರು..? ಅಂತಾ ಕಾಮೆಂಟ್ ಮಾಡುವವರಿಗೆ ನೀತು ಖಡಕ್ ರಿಪ್ಲೈ ಕೊಟ್ಟಿದ್ದಾರೆ. ನಾವು ಹೇಗಿದ್ರು ಜನ ಹೇಳ್ತಾರೆ. ಆದ್ರೂ ಕಾಮೆಂಟ್ ಮಾಡುವವರ ಬಗ್ಗೆ ನಾನು ಸಿಟ್ಟು ಮಾಡ್ತೇನೆ. ಉತ್ತಮರೆಲ್ಲ ಹೀಗೆ ಕಾಮೆಂಟ್ ಮಾಡಲ್ಲ. ಕೆಲಸವಿಲ್ಲದವರು ಕಾಮೆಂಟ್ ಮಾಡ್ತಾರೆ. ಆದ್ರೂ ನಾನು ಅದಕ್ಕೆ ಬೇಸರ ಮಾಡಿಕೊಳ್ಳೋಕ್ಕೆ ಕಾರಣ, ನಾನೂ ಮನುಷ್ಯಳೇ. ನನ್ನ ಪ್ರಕಾರ ಇದು ಚಿಕ್ಕ ವಿಷಯ ಅಲ್ಲ.

ಎಲ್ಲಾದಕ್ಕೂ ಸಣ್ಣ ಆಗೋದೇ ಪರಿಹಾರ ಅಲ್ಲಾ. ತುಂಬಾ ಜನ ದಪ್ಪ ಇದ್ದೋವ್ರು ಪಾಣ ಕಳ್ಕೊಂಡಿದ್ದಾರೆ. ಇದು ಹಲವರಿಗೆ ಗೊತ್ತಿಲ್ಲ. ಆದ್ರೆ ಇದೇ ನಿಜ. ನಾನು ಏನಾದ್ರೂ ಓಪಿನಿಯನ್ ಕೋಳೋಕ್ಕೆ ಹೋದ್ರೆ, ಮೊದಲು ಸಣ್ಣ ಆಗಿ ಬಾ ಅಂತಾ ಹೇಳ್ತಾರೆ. ಓಪಿನಿಯನ್‌ಗೂ ಸಣ್ಣ ಆಗೋದಕ್ಕೂ ಸಂಬಂಧಾನೇ ಇಲ್ಲಾ ಅಂತಾ ನೀತು ಹೇಳಿದ್ರು.

ಅಲ್ಲದೇ, ದಪ್ಪ ಇರೋರೆಲ್ಲಾ, ಜೀವನದಲ್ಲಿ ಬರೀ ಮಜಾ ಮಾಡ್ಕೊಂಡು ಇರ್ತಾರೆ. ಅದಕ್ಕೆ ದಪ್ಪಾ ಇದಾರೆ ಅಂತಾ. ನಿಜ ಅಂದ್ರೆ ಡಿಪ್ರೆಶನ್‌ನಿಂದಾನೂ ತುಂಬಾ ಜನ ದಪ್ಪಾ ಆಗ್ತಾರೆ. ದಪ್ಪ ಆಗೋಕ್ಕೆ ತುಂಬಾ ಕಾರಣಗಳಿರತ್ತೆ. ಹಾಗಾಗಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡೋದು ತಪ್ಪು ಅಂತಾ ಹೇಳಿದ್ದಾರೆ ನೀತು.

- Advertisement -

Latest Posts

Don't Miss