Monday, December 23, 2024

Latest Posts

ನಾನು ಬದುಕಿದ್ದೇನೆ ಎಂದು ಶಾಕ್ ನೀಡಿದ ನಟಿ ಪೂನಂ ಪಾಂಡೆ: ವೀಡಿಯೋ ವೈರಲ್

- Advertisement -

Movie News: ನಟಿ ಪೂನಂ ಪಾಂಡೆ ನಿನ್ನೆ ತಾನೇ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಕೆಯ ಡೆಡ್‌ಬಾಡಿ ಚಿತ್ರ ಮಾತ್ರ ಎಲ್ಲೂ ವೈರಲ್ ಆಗಿರಲಿಲ್ಲ. ಹಾಗಾಗಿ ಹಲವರು ಪೂನಂ ಪಾಂಡೆ ಸಾವನ್ನಪ್ಪಿದ್ದಾಳೆ ಎಂದರೆ ನಂಬಿರಲಿಲ್ಲ. ಇದೀಗ ಆಕೆ ಸತ್ತಿಲ್ಲ, ಬದಲಾಗಿ ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಜಾಗೃತೆ ಮೂಡಿಸಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಕಾಯಿತು ಎಂದು ಹೇಳಿದ್ದಾಳೆ.

ಈ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ವೀಡಿಯೋ ಅಪ್ಲೋಡ್ ಮಾಡಿರುವ ಪೂನಂ, ನಾನು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿರರುವುದಕ್ಕೆ, ಮತ್ತು ನನ್ನಿಂದ ಯಾರ್ಯಾರ ಮನಸ್ಸಿಗೆ ನೋವಾಗಿದೆ ಅವರಿಗೆ ನಾನು ಕ್ಷಮೆ ಕೇಳುತ್ತೇನೆ. ನಾವು ಒಂದು ವಿಷಯದ ಬಗ್ಗೆ ಚರ್ಚಿಸಬೇಕಾಗಿತ್ತು. ಆ ಉದ್ದೇಶದಿಂದ ಈ ರೀತಿ ನಾನು ಸುಳ್ಳು ಸುದ್ದಿ ಹಬ್ಬಿಸಿದೆ. ಆ ವಿಚಾರವೇನೆಂದರೆ, ಗರ್ಭಕಂಠದದ ಕ್ಯಾನ್ಸರ್.

ನಾನು ಗರ್ಭಕಂಠದ ಕ್ಯಾನ್ಸರ್‌ನಿಂದ ಸತ್ತೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಗರ್ಭಕಂಠದ ಕ್ಯಾನ್ಸರ್ ಹೇಗೆ ಬರುತ್ತದೆ..? ಇದಕ್ಕೆ ಪರಿಹಾರವೇನು..? ನಾವು ಯಾವ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕು..? ಹೀಗೆ ಹಲವು ವಿಚಾರದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯಿತು. ನಾನು ಈ ಕಾರಣಕ್ಕೆ ನನ್ನ ಸತ್ತ ಸುದ್ದಿಯ ಬಗ್ಗೆ ಹೆಮ್ಮೆ ಪಡುತ್ತೇನೆ. ನಾನು ಯಾವ ವಿಷಯವನ್ನು ಎಲ್ಲರಿಗೂ ತಿಳಿಸಬೇಕು ಎಂದುಕೊಂಡಿದ್ದೆನೋ, ಆ ವಿಷಯ ಚರ್ಚೆಯಾಗುವಂತೆ ಮಾಡಿದ್ದಕ್ಕೆ, ನನಗೆ ಹೆಮ್ಮೆ ಇದೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ನಾನು ಬದುಕಿದ್ದೇನೆ ಎಂದು ವೀಡಿಯೋ ಮಾಡಿದ ನಟಿ ಪೂನಂ ಪಾಂಡೆ. ಈ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ, ಹೊಸ ಪಕ್ಷ ಘೋಷಣೆ

ರಂಗಾಯಣ ರಘು ಶುರು ಮಾಡಿದ ಹೋಟೇಲ್: ಫೆ.16ಕ್ಕೆ ಶಾಖಾಹಾರಿ ಆರಂಭ

ರವಿಕೆ ಪ್ರಸಂಗ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

- Advertisement -

Latest Posts

Don't Miss