Movie News: ನಟಿ ಪ್ರಣಿತಾ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಹಲವರ ಪ್ರೀತಿಗೆ ಪಾತ್ರರಾಗಿದ್ದಾರೆ. ಅದರಲ್ಲೂ ಹಿಂದುತ್ವದ ವಿಷಯ, ಸಮಾಜಸೇವೆಯ ವಿಷಯ ಬಂದಾಗ, ಮುಂದೆ ಬರುವ ಪ್ರಣಿತಾ, ಇದೀಗ ರಾಮಮಂದಿರಕ್ಕೆ ದೇಣಿಗೆ ಕೊಡುವಲ್ಲಿಯೂ ಮುಂದಿದ್ದಾರೆ. ಪ್ರಣಿತಾ ರಾಮಮಂದಿರಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ನಟಿ ಪ್ರಣಿತಾ, ಇದೊಂದು ಐತಿಹಾಸಿಕ ಚಳುವಳಿ.. ಇದಕ್ಕೆ ನೀವೂ ಕೈಜೋಡಿಸಬೇಕು ಎಂದು ಬರೆದುಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ನಿಧಿ ಸಮರ್ಪಣಾ ಕಾರ್ಯ ಆರಂಭಿಸಿದ್ದಾರೆ. ಇದಕ್ಕೆ ನಾನೂ ಕೈಜೋಡಿಸಿದ್ದೇನೆ. ನೀವೂ ನನ್ನೊಂದಿಗೆ ಕೈ ಜೋಡಿಸಿ ಎಂದು ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅದರಂತೆ ಪ್ರಣಿತಾ ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಇನ್ನು ತಮ್ಮ ಟ್ರಸ್ಟ್ ಮೂಲಕ ಹಲವರಿಗೆ ಸಹಾಯ ಮಾಡಿರುವ ಪ್ರಣಿತಾ, ಕೊರೋನಾ ಸಮಯದಲ್ಲಿ ಬಡವರಿಗೆ ಆಹಾರ, ದುಡ್ಡು, ಬಟ್ಟೆ ನೀಡುವ ಮೂಲಕ ಸಹಾಯ ಮಾಡಿದ್ದರು. ಈ ವೇಳೆ ಪ್ರಣೀತಾ ಬರೀ ನೋಡಲಷ್ಟೆ ಸುಂದರಿಯಲ್ಲಿ, ಆಕೆಯ ಮನಸ್ಸು ಕೂಡ ಶುದ್ಧ ಅಂತಾ ಭೇಷ್ ಎನ್ನಿಸಿಕೊಂಡಿದ್ದರು.
“ಬೊಂಬಾಟ್ ಭೋಜನ”ಕ್ಕೆ ಸಾವಿರದ ಸಂಭ್ರಮ..ಮಕರ ಸಂಕ್ರಾಂತಿಯಿಂದ ನಾಲ್ಕನೇ ಆವೃತ್ತಿ ಆರಂಭ..