Wednesday, April 2, 2025

Latest Posts

‘ಮುಂಗಾರು ಮಳೆ ರಿಲೀಸ್ ಆದಾಗ ನಾನು 2ನೇ ಕ್ಲಾಸ್: ಈಗ ಗಣೇಶ್‌ಗೆ ನಾಯಕಿ’

- Advertisement -

ರಚನಾ ಇಂದರ್. ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕ್ಯೂಟ್ ಚೆಲುವೆ. ಈ ಸಿನಿಮಾದಲ್ಲಿ ನಟಿಸಿದ ಮೇಲೆ ರಚನಾ ಲಕ್ ಖುಲಾಯಿಸಿಯೇ ಬಿಡ್ತು. ಲ್ವ 360 ಸಿನಿಮಾ, ತ್ರಿಬಲ್ ರೈಡಿಂಗ್ ಸಿನಿಮಾ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ರಚನಾ ನಟಿಸುತ್ತಿದ್ದಾರೆ. ಅಲ್ಲದೇ ಇನ್ನೇನು ರಿಲೀಸ್ ಆಗಲಿರುವ ಹರಿಕಥೆ ಅಲ್ಲಾ ಗಿರಿಕಥೆ ಅನ್ನೋ ಸಿನಿಮಾದಲ್ಲೂ ರಚನಾ ಆ್ಯಕ್ಟ್ ಮಾಡಿದ್ದಾರೆ. ಹಾಗಾದ್ರೆ ಈ ಸಿನಿಮಾ ಮಾಡುವಾಗ ಅವರ ಅನುಭವ ಹೇಗಿತ್ತು ಅನ್ನೋ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ರಚನಾಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋ ಚಾನ್ಸ್ ಸಿಕ್ತಿರೋದು ನಿಜವಾಗಿದ್ರು, ಅದು ಸುಮ್ಮನೆ ಸಿಕ್ತಿಲ್ಲ. ಬದಲಾಗಿ ಅವರು ಪ್ರತೀ ಸಿನಿಮಾಗೂ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದಾರೆ. ಅದರಲ್ಲಿ ಪಾಸ್ ಆದ್ಮೇಲೇನೆ ಅವರಿಗೆ ಚಾನ್ಸ್ ಸಿಕ್ಕಿರೋದು. ಅದೇ ರೀತಿ ಹರಿಕಥೆ ಅಲ್ಲಾ ಗಿರಿ ಕಥೆ ಸಿನಿಮಾಗೂ ಕೂಡ ರಚನಾ ಸ್ಕ್ರೀನ್ ಟೆಸ್ಟ್ ಕೊಟ್ಟೇ ಸೆಲೆಕ್ಟ್ ಆಗಿದ್ದಾರೆ. ಸಿನಿಮಾ ಟ್ರೇಲರ್ ರಿಲಿಸ್ ಆಗದ ಕಾರಣ, ಸಿನಿಮಾದಲ್ಲಿ ತಮ್ಮ ಪಾತ್ರವೇನು ಅನ್ನೋ ಬಗ್ಗೆ ರಚನಾ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದ್ರೆ ರಿಷಬ್ ಸರ್ ತುಂಬಾ ಸ್ವೀಟ್ ಅವರು ಫ್ರೆಂಡ್ಲಿಯಾಗಿದ್ರು ಸೆಟ್ಟಲ್ಲಿ ಅಂತಾ ರಚನಾ ಹೇಳಿದ್ದಾರೆ.

ಇನ್ನು ಗೋಲ್ಡನ್ ಸ್ಟಾರ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾದಲ್ಲೂ ಕೂಡ ರಚನಾ ನಟಿಸಿದ್ದಾರೆ. ಆಕ್ಚ್ಯುಲಿ ಮುಂಗಾರು ಮಳೆ ಸಿನಿಮಾ ಬಂದಾಗ, ರಚನಾ 2ನೇ ಕ್ಲಾಸ್ ಇದ್ರಂತೆ. ಅವರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿದ್ರಂತೆ. ಆದ್ರೆ ಈಗ ಆ ಹಿರೋ ಜೊತೆ ನಟಿಸೋ ಅವಕಾಶ ಸಿಕ್ಕಿದ್ದಕ್ಕೆ ರಚನಾ ಖುಷ್ ಆಗಿದ್ದಾರೆ. ಗಣೇಶ್ ಸರ್ ನಾನು ಆ್ಯಕ್ಟಿಂಗ್‌ನಲ್ಲಿ ತಪ್ಪು ಮಾಡಿದಾಗ, ತಪ್ಪು ತಿದ್ದಿದ್ದಾರೆ. ಕೂಲ್ ಆಗಿ ನನ್ನೊಟ್ಟಿಗೆ ಆ್ಯಕ್ಟಿಂಗ್ ಮಾಡಿದ್ದಾರೆ ಅಂತಾ ರಚನಾ ಕಿರುನಗೆ ನಕ್ಕಿದ್ದಾರೆ.

- Advertisement -

Latest Posts

Don't Miss