Friday, April 18, 2025

Latest Posts

2ನೇಯ ಮದುವೆ ಬಗ್ಗೆ ಮಾತನಾಡಿದ ನಟಿ ಸಮಂತಾ

- Advertisement -

Movie News: ನಟ ನಾಗ ಚೈತನ್ಯ ಜೊತೆ ಪ್ರೇಮ ವಿವಾಹವಾಗಿ, ಬಳಿಕ ಡೈವೋರ್ಸ್ ಪಡೆದಿದ್ದ ಸಮಂತಾ, ಕೊಂಚ ಸಮಯ ಅನಾರೋಗ್ಯಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಸಮಂತಾ, ಎರಡನೇಯ ಮದುವೆ ಬಗ್ಗೆ ಮಾತನಾಡಿದ್ದಾರೆ.

ಕೆಲ ಮಾಧ್ಯಮಗಳು ಸಮಂತಾ ಎರಡನೇಯ ಮದುವೆಗೆ ಸಿದ್ದರಾಗಿದ್ದಾರೆ. ಈ ಬಗ್ಗೆ ಯೋಚಿಸುತ್ತಿದ್ದಾರೆ. ಯಾರು ಗೊತ್ತಾ ಸಮಂತಾ ಮನಗೆದ್ದ ಹುಡುಗ ಅಂತೆಲ್ಲಾ ಊಹಾಪೋಹ ಹಬ್ಬಿಸಿದ್ದರು. ಆದರೆ ಸಮಂತಾ ಇದೇ ಮೊದಲ ಬಾರಿಗೆ, ಎರಡನೇಯ ಮದುವೆ ಬಗ್ಗೆ ಮಾತನಾಡಿದ್ದು, ತಾನು ಡಿವೋರ್ಸ್ ಬಳಿಕ, ಮತ್ತೊಂದು ಮದುವೆ ಬಗ್ಗೆ ಯೋಚನೆಯೇ ಮಾಡಲಿಲ್ಲ ಎಂದಿದ್ದಾರೆ.

ಅಲ್ಲದೇ, ಎರಡನೇಯ ಮದುವೆಯಾಗೋದು ಕೂಡಾ ವೇಸ್ಟ್. ಅಲ್ಲೂ ನನಗೆ ಡಿವೋರ್ಸ್ ಆಗಬಹುದು. ಆ ಮದುವೆಯೂ ಮುರಿದು ಬೀಳಲ್ಲವೆಂದು ಏನು ಗ್ಯಾರಂಟಿ..? ಹಾಗಾಗಿ ನನಗೆ ಎರಡನೇಯ ಮದುವೆ ಬಗ್ಗೆ ಆಸಕ್ತಿ ಇಲ್ಲವೆಂದು ಸಮಂತಾ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗಿದ್ದ ಕುತೂಹಲ, ಕಾತುರತೆಗೆ ಸಮಂತಾ ಸ್ಪಷ್ಟನೆ ನೀಡಿದ್ದಾರೆ.

- Advertisement -

Latest Posts

Don't Miss