Movie News: ಬಾಲಿವುಡ್ ನಟಿ ಸನ್ನಿಲಿಯೋನ್ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ಇರುವವರು, ಬರೀ ಸಿನಿಮಾವನ್ನೇ ನಂಬಿಕೊಂಡು ಇದ್ದರೆ ಸಾಕಾಗುವುದಿಲ್ಲ. ಏಕೆಂದರೆ, ಅಪರೂಪಕ್ಕೆ ಅವಕಾಶ ಹುಡುಕಿಕೊಂಡು ಬರುತ್ತದೆ. ಅಲ್ಲಿಯವರೆಗೂ ಖಾಲಿ ಕೈಯಲ್ಲಿ ಕೂರಲಾಗುವುದಿಲ್ಲ. ಇದನ್ನು ಚೆನ್ನಾಗಿ ಅರಿತ ಎಷ್ಟೋ ಜನ, ಸಿನಿಮಾ ಜೊತೆಗೆ, ಬೇರೆ ಬೇರೆ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕೆಲವರು ಕ್ಯಾಂಡಲ್ ಬ್‌ಯುಸಿನೆಸ್, ಸೋಪ್ ಬ್ಯುಸಿನೆಸ್, ಹೊಟೇಲ್ ಹೀಗೆ ಹಲವು ಉದ್ಯಮ ಮಾಡುತ್ತಿದ್ದಾರೆ. ಅದೇ ರೀತಿ ನಟಿ ಸನ್ನಿ ಲಿಯೋನ್ ಕೂಡ, ತಮ್ಮದೇ ಆದ ಹೊಸ ರೆಸ್ಟೋರೆಂಟ್ ಶುರು ಮಾಡಿದ್ದಾರೆ. ಅದಕ್ಕೆ ಚಿಕಾಲೊಕಾ ಎಂದು ನಾಮಕರಣ ಮಾಡಿದ್ದಾರೆ. ಸನ್ನಿಗೆ ಎಷ್ಟೋ ವರ್ಷಗಳಿಂದ ತಮ್ಮದೇ ಆದ ಒಂದು ರೆಸ್ಟೋರೆಂಟ್ ಮಾಡಬೇಕು ಎಂಬ ಆಸೆ ಇತ್ತು, ಇತ್ತೀಚೆಗೆ ಸನ್ನಿ ಆ ಆಸೆ ಈಡೇರಿಸಿಕೊಂಡಿದ್ದಾರೆ.
ಅಲ್ಲದೇ ಈ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಹಲವು ವರ್ಷಗಳಿಂದ ನನಗೆ ನನ್ನದೇ ಆದ ರೆಸ್ಟೋರೆಂಟ್ ತೆರೆಯಬೇಕು ಎಂಬ ಕನಸಿತ್ತು. ಅದು ಪೂರ್ಣವಾಗಿದೆ. ಇದು ಬರೀ ರೆಸ್ಟೋರೆಂಟ್ ಅಲ್ಲ, ಇಲ್ಲಿ ನೀವು ಫನ್ ಕೂಡ ಮಾಡಬಹುದು ಎಂದು ಸನ್ನಿ ಬರೆದುಕೊಂಡಿದ್ದಾರೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾಗೌಡ
ಎಮರ್ಜೆನ್ಸಿ ಚಿತ್ರ ರಿಲೀಸ್ ಬಗ್ಗೆ ಮಾಹಿತಿ ನೀಡಿದ ನಟಿ ಕಂಗನಾ ರಾಣಾವತ್
ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ತನ್ನ ಮನೆಯಲ್ಲಿ ಹೋಮ ನಡೆಸಿದ ನಟಿ ಊರ್ಫಿ ಜಾವೇದ್