Sunday, July 6, 2025

Latest Posts

ಇನ್ಮುಂದೆ ವಿಳಾಸ ಬದಲಾವಣೆ ಸುಲಭ, ದೇಶಾದ್ಯಂತ 166 ಸೇವಾ ಕೇಂದ್ರ ಓಪನ್

- Advertisement -

ನವದೆಹಲಿ: ದೇಶದಾದ್ಯಂತ 166 ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಅಲ್ಲಿ ಆಧಾರ್ ನೋಂದಣಿ ಮತ್ತು ವಿಳಾಸ ಬದಲಾವಣೆಯಂತಹ ಸೇವೆಗಳನ್ನು ಒದಗಿಸಲಾಗುವುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ ತಿಳಿಸಿದೆ.

ಯುಐಡಿಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌರವ್ ಗಾರ್ಗ್ ಅವರು ಗಾಜಿಯಾಬಾದ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದುವರೆಗೆ ದೇಶದಲ್ಲಿ 58 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಆಸಕ್ತ ವ್ಯಕ್ತಿಗಳು ಆಧಾರ್ ನೋಂದಣಿ ಮತ್ತು ವಿಳಾಸ ಬದಲಾವಣೆಯಂತಹ ಸೇವೆಗಳಿಗಾಗಿ ಈ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು ಅಂತ ಹೇಳಿದ್ದಾರೆ. ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಯುಐಡಿಎಐ ದೇಶಾದ್ಯಂತ 122 ನಗರಗಳಲ್ಲಿ 166 ಆಧಾರ್ ಸೇವಾ ಕೇಂದ್ರಗಳನ್ನು ನಿರ್ವಹಿಸಲು ಮುಂದಾಗಿದ್ದು, 58 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವು ಕಾರ್ಯಾರಂಭ ಮಾಡಿವೆ ಅಂತ ಹೇಳಿದ್ದಾರೆ. ಈ ಎಲ್ಲಾ ಕೇಂದ್ರಗಳು ಹವಾನಿಯಂತ್ರಿತವಾಗಿದ್ದು, ಸಾಕಷ್ಟು ಆಸನ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ವಿಕಲಚೇತನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಅವರು ಹೇಳಿದರು.

- Advertisement -

Latest Posts

Don't Miss