Bollywood News: ಹಲವು ದಿನಗಳಿಂದ ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ, ಪತಿ ಅಭಿಷೇಶ್ ಬಚ್ಚನ್‌ರಿಂದ ಡಿವೋರ್ಸ್ ತೆಗೆದುಕೊಳ್ಳುತ್ತಾರೆಂದು ಹೇಳಲಾಗುತ್ತಿತ್ತು.
ಅಭಿಷೇಕ್ ಮತ್ತು ಐಶ್ವರ್ಯಾ ಮಧ್ಯೆ ವೈವಾಹಿಕ ಜೀವನ ಸರಿ ಇಲ್ಲ. ಅವರ ಮಧ್ಯೆ ಭಿನ್ನಾಭಿಪ್ರಾಯ ಬಂದಿದೆ. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ನಟ ಮತ್ತು ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಬಟ್ಟೆ ಮುಟ್ಟಿ, ನಟಿ ಪ್ರಶಂಸೆ ಮಾಡಿದ ಬಳಿಕ, ಈ ಭಿನ್ನಾಭಿಪ್ರಾಯ ಇನ್ನೂ ಹೆಚ್ಚಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿತ್ತು.
ಅಷ್ಟೇ ಅಲ್ಲದೇ, ಐಶ್ವರ್ಯಾ ಅಭಿಷೇಕ್ ಕಡೆಯಿಂದ ಡಿವೋರ್ಸ್ ಪಡೆದರೆ, ಕೋಟಿ ಕೋಟಿ ಪರಿಹಾರ ತೆಗೆದುಕೊಳ್ಳುತ್ತಾರೆ ಅಂತಲೂ ಸುದ್ದಿಯಾಗಿತ್ತು. ಇಂದು ಅಭಿಷೇಕ್ ಬಚ್ಚನ್ ಬರ್ತ್‌ಡೇ ಇದ್ದು, ಐಶ್ವರ್ಯಾ ಸಂಜೆ ಆದ್ರೂ ಒಂದು ಪೋಸ್ಟ್ ಹಾಕಿ, ಗಂಡನಿಗೆ ಬರ್ತ್‌ಡೇ ವಿಶ್ ಮಾಡಲಿಲ್ಲ. ಅಂದರೆ ಡಿವೋರ್ಸ್ ತೆಗೆದುಕೊಳ್ಳುವುದು ಫಿಕ್ಸ್ ಅಂತಲೂ ಹಲವರೇ ಭಾವಿಸಿದ್ದರು.
ಆದರೆ ಸಂಜೆಯಾಗುತ್ತಿದ್ದಂತೆ, ಐಶ್ವರ್ಯಾ ತಾನು, ಅಭಿಷೇಕ್ ಮತ್ತು ಮಗಳು ಆರಾಧ್ಯಾ ಒಟ್ಟಿಗೆ ಇರುವ ಫೋಟೋ ಮತ್ತು ಅಭಿಷೇಕ್ ಬಾಲ್ಯದ ಫೋಟೋವನ್ನು ಪೋಸ್ಟ್ ಮಾಡಿ, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಖುಷಿ, ಪ್ರೀತಿ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯವನ್ನು ದೇವರು ನಿಮಗೆ ನೀಡಲಿ ಎಂದು ಬರೆದಿದ್ದಾರೆ. ಅಲ್ಲದೇ, ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ಬರೀ ಅಭಿಷೇಕ್ ಒಬ್ಬರನ್ನೇ ಫಾಲೋ ಮಾಡ್ತಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಐಶ್ವರ್ಯಾ ಬ್ರೇಕ್ ಹಾಕಿದ್ದಾರೆ.
ಪದೇ ಪದೇ ಒಂದೇ ಪ್ರಾಡಕ್ಟ್ ಲಾಂಚ್ ಮಾಡಿದ್ದಕ್ಕೆ ಕಾಂಗ್ರೆಸ್ ಸೋತಿದೆ: ರಾಹುಲ್ ಬಗ್ಗೆ ಮೋದಿ ವ್ಯಂಗ್ಯ
ಗಿಲ್ಲಿ ದಾಂಡು ಆಡಿ ಎಂಜಾಯ್ ಮಾಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ: ವೀಡಿಯೋ ವೈರಲ್
ನಾಗಿನ್ ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನಟಿ ಅಂಕಿತಾ: 1 ಎಪಿಸೋಡ್‌ಗೆ ಎಷ್ಟು ಸ್ಯಾಲರಿ ಗೊತ್ತಾ..?