ನಾನು ರ್ಯಾಪರ್ ಆಗೋಕ್ಕೆ ನನ್ನ ಮನೆಯವ್ರೇ ನನಗೆ ಸಪೋರ್ಟ್ ಮಾಡಿದ್ರು. ನೀನು ಹೆಚ್ಚು ಓದದೇ ಇದ್ರೂ ಪರ್ವಾಗಿಲ್ಲಾ. ನೀನು ಯಾವ ಕೆಲಸವಾದ್ರೂ ಮಾಡು. ಆದ್ರೆ ನಿಯತ್ತಾಗಿ ಕೆಲಸ ಮಾಡು. ಯಾರಿಗೂ ಮೋಸ ಮಾಡಬೇಡ. ಯಾರ ಬಗ್ಗೆಯೂ ಕೀಳಾಗಿ ಮಾತಾಡ್ಬೇಡಾ. ಯಾರ ಅನ್ನವೂ ಕಿತ್ತುಕೊಳ್ಳಬೇಡಾ ಅಂತಾ ನನಗೆ ಒಳ್ಳೆ ದಾರಿಯಲ್ಲಿ ನಡೆಯುವಂತೆ ಹೇಳಿ, ನನಗೆ ಸಪೋರ್ಟ್ ಮಾಡಿದವ್ರು ನನ್ನ ಮನೆಯವರು ಅಂತಾ ಹೆಮ್ಮೆಯಿಂದ ಹೇಳ್ತಾರೆ ಅಲೋಕ್.
ಇನ್ನು ಯಾವ್ದಾದ್ರೂ ಚಾನ್ಸ್ ಸಿಕ್ಕು ತಾನು ಫೇಮಸ್ ಆಗ್ಬೇಕು ಅಂತಾ ಕಾಯ್ತಿದ್ದ ಅಲೋಕ್ ಮತ್ತು ಅವರ ಟೀಂ ಹುಡುಗರಿಗೆ ಜೋಶ್ ಸಿನಿಮಾದಲ್ಲಿ ಅವಕಾಶ ಸಿಕ್ತು. ಈ ಸಿನಿಮಾದಲ್ಲಿ ಆಲೋಕ್ ಮತ್ತು ಅವರ ಟೀಂ ಜೋಶ್ಫುಲ್ ಆಗಿರುವ ಮ್ಯೂಸಿಕ್ ಕೊಟ್ಟು, ಸಖತ್ ಫೇಮಸ್ ಆಯ್ತು. ಅಲ್ಲಿ ಅಲೋಕ್ ಲಕ್ ಖುಲಾಯಿಸಿದ್ದು, ಅವರ ಸಿನಿ ಜರ್ನಿ ಇಲ್ಲಿಯವರೆಗೂ ಉತ್ತಮವಾಗಿ ಸಾಗಿಕೊಂಡು ಬಂದಿದೆ.
ಇನ್ನು ಅಲೋಕ್ ತಮ್ಮ ಸಂಗೀತ ಪಯಣದಲ್ಲಿ ಮೊದಲು ಬರೆದ ಹಾಡು ಕೇಕ್ ಅಂತಾ. ಇವರು ತುಂಬಾ ಬೇಸರದಲ್ಲಿದ್ದಾಗ ಬರೆದ ಹಾಡಿದು. ಈ ಹಾಡನ್ನ ಕಳೆದ ವರ್ಷ ರಿಲೀಸ್ ಮಾಡಿದ್ದಾರಂತೆ.