Saturday, April 19, 2025

Latest Posts

‘ಜನಾನೇ ನಮ್ಮ ಬಾಸ್, ಅವರು ಹೇಳಿದ ಹಾಗೆ ವೀಡಿಯೋ ಮಾಡ್ತಿದ್ದೀವಿ’

- Advertisement -

ಅಲ್ಲು ರಘು ಮತ್ತು ಸುಶ್ಮಿತಾ ತಾವು ಡಬ್‌ಸ್ಮ್ಯಾಶ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಇಂದು ಅವರಿಗೆ ಧ್ರುವ ಸರ್ಜಾ ಪರಿಚಯವಾಗಿದ್ದು ಹೇಗೆ..? ಬೆಂಗಳೂರಲ್ಲಿ ರಘುಗೆ ಸಪೋರ್ಟ್ ಮಾಡಿದ್ದು ಯಾರು, ಇತ್ಯಾದಿ ವಿಷಯಗಳ ಬಗ್ಗೆ ಈ ಜೋಡಿ ಮಾತನಾಡಿದೆ.

ಬೆಂಗಳೂರಲ್ಲಿ ರಘುಗೆ ಯಾರೂ ಪರಿಚಯವಿಲ್ಲದ ಕಾರಣ, ಸುಶ್ಮಿತಾ ಮತ್ತು ಅವರ ತಂದೆ ತಾಯಿನೇ ರಘುಗೆ ಸಪೋರ್ಟ್ ಮಾಡಿದ್ದಂತೆ. ಹಾಗಾಗಿ ನಾವು ಈಗ ಇಷ್ಟು ಪೇಮಸ್ ಇದ್ದೀವಿ ಅಂದ್ರೆ ಅದಕ್ಕೆ ಸುಶ್ಮಿತಾ ತಂದೆ ತಾಯಿ ಮತ್ತು ನಮ್ಮನ್ನ ಫೇಮಸ್ ಮಾಡಿದ ಜನರೇ ಕಾರಣ ಅಂತಾರೆ ರಘು. ಜನ ಹೇಗೆ ವೀಡಿಯೋ ಮಾಡಿ ಅಂತಾರೆ ನಾವು ಹಾಗೆ ಮಾಡ್ತೀವಿ.

ನಾವು ಡಬಲ್ ಮೀನಿಂಗ್ ವೀಡಿಯೋ ಮಾಡಿದ್ರೆ, ಕಾಮೆಂಟ್‌ನಲ್ಲಿ ಜನರೇ ಈ ರೀತಿ ವೀಡಿಯೋ ಮಾಡ್ಬೇಡಿ ಅಂತಾರೆ. ಸುಶ್ಮಿತಾ ಶಾರ್ಟ್ ಡ್ರೆಸ್ ಹಾಕಿದ್ರೆ, ಹೆಣ್ಣು ಮಕ್ಕಳೇ, ಅಕ್ಕ ಇಂಥ ಡ್ರೆಸ್ ಹಾಕ್ಬೇಡಿ ಅಂತಾರೆ. ಹಾಗಾಗಿ ನಾವು ಜನ ಯಾವ ರೀತಿಯ ಇಷ್ಟ ಪಡ್ತಾರೋ ಆ ರೀತಿನೇ ವೀಡಿಯೋ ಮಾಡ್ತೀವಿ. ಅವರಿಂದಾನೇ ನಾವು ಫೇಮಸ್ ಆಗಿರೋದು, ಹಾಗಾಗಿ ಅವರಿಗೆ ಇಷ್ಟವಾಗುವ ರೀತಿನೇ ನಾವಿರ್ತೀವಿ ಅಂತಾರೆ ರಘು.

ಇನ್ನು ಧ್ರುವ ಸರ್ಜಾ ಬಗ್ಗೆ ಮಾತನಾಡಿದ ರಘು, ಅವರದ್ದು ಧಾರಾಳ ಮನಸ್ಸು. ಅವರು ಶಾರ್ಟ್ ಫಿಲ್ಮ್ ಮಾಡುವವರಿಗೆ, ಡಬ್‌ಸ್ಮ್ಯಾಶ್ ಮಾಡುವವರಿಗೆ, ಟ್ಯಾಲೆಂಟ್ ಇರುವವರಿಗೆ ಎಲ್ಲರಿಗೂ ಸಪೋರ್ಟ್ ಮಾಡ್ತಾರೆ. ಅವರು ಯಾವ ಊರವ್ರಾದ್ರೂ ಸರಿ, ಯಾವ ಜಾತಿ, ಧರ್ಮ, ಯಾರೇ ಆದ್ರೂ ಸರಿ, ಅವರ ಟ್ಯಾಲೆಂಟ್‌ಗೆ ಧ್ರುವ ಅಣ್ಣ ಬೆಲೆ ಕೊಡ್ತಾರೆ ಅಂತಾ ರಘು ಹೇಳಿದ್ರು.

ಇನ್ನು ರಘು ಮತ್ತು ಸುಶ್ಮಿತಾಗೆ ಹೆಣ್ಣು ಮಗು ಜನಿಸಿದ್ದಾಗ, ಮಗು ಹುಟ್ಟುವ ಘಳಿಗೆ ರಘು ಟೆನ್ಶನ್‌ನಲ್ಲಿದ್ರು. ಆದ್ರೆ ಅವರ ಟೆನ್ಶನ್‌ನ ದೂರ ಮಾಡೋಕ್ಕೆ, ಧ್ರುವ ಜಿಮ್‌ನಿಂದ ವೀಡಿಯೋ ಕಾಲ್ ಮಾಡಿ, ಕೂಲ್ ಆಗಿ ಮಾತಾಡ್ತಿದ್ರು. ಅದು ನಮಗೆ ಖುಷಿ ಅನ್ನಿಸ್ತು ಅಂತಾರೆ ರಘು. ಇನ್ನು ಆ ಸಮಯದಲ್ಲಿ ಕೋವಿಡ್ ಭಯ ಇದ್ರೂ ಕೂಡ, ಮಗು ಹುಟ್ಟಿದ ಮರುದಿನವೇ ಧ್ರುವ ಅವರು ಮಗುವನ್ನ ನೋಡೋಕ್ಕೆ, ಅತ್ತಿಗೆ ಸಮೇತ ಆಸ್ಪೆತ್ರೆಗೆ ಬಂದಿದ್ರು ಅಂತಾ ರಘು ಖುಷಿ ಪಟ್ಟರು.

- Advertisement -

Latest Posts

Don't Miss