ಬಾಲಿವುಡ್‌ನ ಖ್ಯಾತ ನಟ ಅಮೀರಖಾನ್ ಪುತ್ರಿ ಇರಾ ಖಾನ್, ನಿನ್ನೆ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಅವರ ಬರ್ತ್‌ಡೇ ಪಾರ್ಟಿ ಬಗ್ಗೆ ಎಲ್ಲೆಡೆ ಸುದ್ದಿಯಾಗಿದೆ. ನಾರ್ಮಲ್ ಆಗಿ, ಸ್ಟಾರ್ ನಟರನ್ನ ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಿ, ಕೇಕ್ ಕತ್ತರಿಸಿ, ಸೆಲೆಬ್ರೇಟ್ ಮಾಡಿದ್ರೆ, ಅವರ ಬರ್ತ್‌ಡೇ ಪಾರ್ಟಿ ಇಷ್ಟೊಂದು ಸುದ್ದಿಯಾಗ್ತಿರ್ಲಿಲ್ಲ. ಆದ್ರೆ ಆಕೆ ಬರ್ತ್‌ಡೇ ಪಾರ್ಟಿಯನ್‌ನ ಡಿಫ್ರೆಂಟ್ ಆಗಿ ಸೆಲೆಬ್ರೇಟ್ ಮಾಡೋಕ್ಕೆ ಹೋಗಿ, ನೆಟ್ಟಿಗರಿಂದ ಉಗಿಸಿಕೊಂಡಿದ್ದಾಳೆ. ಯಾಕಂದ್ರೆ ಇರಾ ಬಿಕಿನಿ ತೊಟ್ಟು ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ.
ಅವರು ತಮ್ಮ ಬರ್ತ್‌ಡೇ ಸೆಲೆಬ್ರೇಷನ್ ಫೋಟೋವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದು, ಜನ ತರಹೇವಾರಿ ಕಾಮೆಂಟ್ಸ್ ಹಾಕಿದ್ದಾರೆ. ಕೆಲವರು ಬರ್ತ್‌ಡೇ ವಿಶ್ ಮಾಡಿದ್ರೆ, ಇನ್ನು ಕೆಲವರು ಇರಾ ವೇಷ ನೋಡಿ, ಬೈದಿದ್ದಾರೆ. ನಿನ್ನ ಅಪ್ಪ ಊರಿನವರಿಗೆಲ್ಲ ಬುದ್ಧಿ ಹೇಳ್ತಾನೆ. ನೀನು ನೋಡಿದ್ರೆ ಬಿಕಿನಿ ಹಾಕ್ತೀಯ ಅಂತಾ ಓರ್ವ ಬೈದರೆ, ಇನ್ನೋರ್ವ ಇದೆಂಥಾ ಬಟ್ಟೆ, ಬಡವರ ಮಕ್ಕಳಿಗೆ ಹಿಜಬ್, ನಿಮಗೆ ಬಿಕಿನಿನಾ ಅಂತಾ ಬೈದಿದ್ದಾನೆ.
ಇನ್ನು ಇರಾ ಬರ್ತ್‌ಡೇ ವೇಳೆ ಅಮೀರ್ ಖಾನ್, ಮಾಜಿ ಪತ್ನಿ ಅಂದ್ರೆ ಇರಾಳ ತಾಯಿ, ರೀನಾ ದತ್ತಾ, ಇನ್ನೋರ್ವ ಮಾಜಿ ಪತ್ನಿ ಕಿರಣ್ ರಾವ್, ಅವರ ಮಗ ಆಜಾದ್ ಮತ್ತು ಇರಾ ಪ್ರಿಯಕರ ನುಪುರ್ ಸೇರಿ, ಸಂಬಂಧಿಕರು ಮತ್ತು ಗೆಳೆಯರ ಬಳಗ ಇರಾ ಪಾರ್ಟಿಯಲ್ಲಿ ಉಪಸ್ಥಿತರಿದ್ದರು. ಕೆಲ ತಿಂಗಳ ಹಿಂದಷ್ಟೇ ಇರಾ ತನ್ನ ತೂಕ ಹೆಚ್ಚಳವಾದ ಕಾರಣ, 15 ದಿನ ಉಪವಾಸ ಮಾಡಿ, ತೂಕ ಕಡಿಮೆ ಮಾಡಿಕೊಂಡು, ಎಲ್ಲರಿಂದ ಶಭಾಷ್ ಎನ್ನಿಸಿಕೊಂಡಿದ್ದಳು. ಆದ್ರೆ ಈಗ ಹೀಗೆ ಬಿಕಿನಿ ತೊಟ್ಟು, ಬರ್ತ್‌ಡೇ ಆಚರಿಸಿ, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.