Sunday, April 13, 2025

Latest Posts

2024ರಲ್ಲೂ ಮತ್ತೆ ನರೇಂದ್ರ ಮೋದಿ ಅಧಿಕಾರಕ್ಕೆ..!

- Advertisement -

ಗುಜರಾತ್: 2024ರ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ನರೇಂದ್ರ ಮೋದಿಯವರೇ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ, ಅಲ್ಲದೆ ಮುಂದಿನ ಬಾರಿಯೂ ಅವರೇ ದೇಶದ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಪ್ರವಾಸದಲ್ಲಿರೋ ಅಮಿತ್ ಶಾ, ಇಂದು ಇಲ್ಲಿನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ರು, ಈ ವೇಳೆ ಮಾತನಾಡಿದ ಅಮಿತ್ ಶಾ, ಮೋದಿಯವರನ್ನು ಬಿಟ್ಟು ಮತ್ತ್ಯಾವ ನಾಯಕ ಕೂಡ 20 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ನಿರಂತರವಾಗಿ ಸಾಂವಿಧಾನಿಕ ಹುದ್ದೆಯಲ್ಲಿಲ್ಲ ಅಂತ ಹೇಳಿದ್ರು. 20 ವರ್ಷಗಳ ಕಾಲ ಕೊಂಚವೂ ಬ್ರೇಕ್​ ಇಲ್ಲದೆ, ನಿರಂತರವಾಗಿ ಜನರ ಸೇವೆ ಮಾಡಿದ ಹೆಗ್ಗಳಿಗೆ ಪ್ರಧಾನಿ ಮೋದಿಯವರದ್ದು. ಹೀಗಾಗಿ ನರೇಂದ್ರ ಮೋದಿಯವರನ್ನು ಜನರು ಆಯ್ಕೆ ಮಾಡುತ್ತಿದ್ದಾರೆ ಅಂತ ಅಮಿತ್ ಶಾ ಹೇಳಿದ್ರು.

ಬ್ಯೂರೋ ರಿಪೋರ್ಟ್, ಕರ್ನಾಟಕ ಟಿವಿ

- Advertisement -

Latest Posts

Don't Miss