ಬೆಂಗಳೂರು : ಮಕ್ಕಳ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 14 ರಂದು ವಿಜಯ್ ಭಾರದ್ವಾಜ್ ಎಂಬ ಬಿಹಾರ ಮೂಲದವನು ಬೆಂಗಳೂರಿಗೆ ಬಂದು ಎಂಬಿಬಿಎಸ್ ಮುಗಿಸಿ ಎಂಎಸ್ ಓದುತ್ತಿದ್ದ, ಕಿಮ್ಸ್ ಕಾಲೇಜಿನ ವಿದ್ಯಾರ್ಥಿ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ್ದು ತಪ್ಪೊಪ್ಪಿಕೊಂಡಿದ್ದಾನೆ. ಈತನ ಕಾಟಕ್ಕೆ ದೀಪಾ ಶ್ರೀಕುಮಾರ್ ರವರು 21 ವರ್ಷದ ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಹಿನ್ನೆಲೆಯಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೀಪ ಶ್ರೀಕುಮಾರ್ ರವರು ದೂರು ನೀಡಿದ್ದರು. ಶುಕ್ರವಾರ ಮಗಳು ಮತ್ತು ಮಗನೊಂದಿಗೆ ಹೊಸಕೋಟೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ತಡರಾತ್ರಿ 2:00 ಗಂಟೆಗೆ ಮನೆಗೆ ವಾಪಸಾಗುತ್ತಿದ್ದಾಗ ಹೆಬ್ಬಾಳದ ಬಳಿ ಕಾರಿನ ಟೈರ್ ಪಂಚರ್ ಆಗಿತ್ತು, ಟೈಗರ್ ಬದಲಿಸುತ್ತಿದ್ದಾಗ ಅಪರಿಚಿತ ಕಾರೊಂದು ಬಂದು ದೀಪಾ ಶ್ರೀಕುಮಾರ್ ಪುತ್ರಿಗೆ ಅಸಭ್ಯವಾಗಿ ಪ್ರಶ್ನಿಸಿದ್ದ ಆತನಿಗೆ ಬೈದು ಕೂಡಲೇ ಕಾರು ಹತ್ತಿ ಹೊರಟಿದ್ದರು ಆದರೆ ಅಪರಿಚಿತ ವ್ಯಕ್ತಿ ಗೊರಗುಂಟೆಪಾಳ್ಯ ದವರೆಗೆ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಹೆದರಿದ ದೀಪ ಶ್ರೀಕುಮಾರ್ ಪೊಲೀಸರಿಗೆ ಕರೆ ಮಾಡಿ ಸಂಗತಿ ವಿವರಿಸಿದ್ದರು. ಪೊಲೀಸರ ಬಂದ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ ಕಾರಿನ ನಂಬರನ್ನು ನೋಟ್ ಮಾಡಿದ ಕಾರಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.