ಪ್ರಾಚೀನ ಕಾಲದಲ್ಲಿ ಭಾರತದಿಂದ ಬ್ರಿಟಿಷರು ಸಾಕಷ್ಟು ವಿಗ್ರಹಗಳನ್ನು ಕೊಳ್ಳೆಹೊಡೆದಿದ್ದಾರೆ, ಒಂದೊoದೇ ವಿಗ್ರಹಗಳು ಭಾರತಕ್ಕೆ ಹಸ್ತಾಂತರ ವಾಗುತ್ತಿವೆ, ಅದರಲ್ಲಿ ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹವೊಂದು ಬ್ರಿಟನ್‌ನ ಖಾಸಗೀ ನಿವಾಸವೊಂದರ ಉದ್ಯಾನವನದಲ್ಲಿ ಸಿಕ್ಕಿತ್ತು ಅದನ್ನು ಇಂಗ್ಲೆoಡ್ ಸಂಕ್ರಾoತಿ ಹಬ್ಬದಂದೇ ಭಾರತಕ್ಕೆ ರವಾನಿಸಿದೆ.
ಮೇಕೆ ಮುಖವುಳ್ಳ ಯೋಗಿನಿಯ ವಿಗ್ರಹ ಇದಾಗಿದೆ. ಯುಕೆಯ ಕ್ರಿಸ್ ಮರಿನೆಲ್ಲೋ ಆಫ್ ಆರ್ಟ್ ರಿಕವರಿ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಲು ಎಲ್ಲಾ ರೀತಿಯ ಸಹಕಾರವನ್ನು ನೀಡಿದೆ, ಪ್ರಮುಖವಾಗಿ ಈ ವಿಗ್ರಹವನ್ನು ಇಂಗ್ಲೆoಡ್‌ನ ಭಾರತೀಯ ಹೈಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್‌ಗೆ ಈ ಶಿಲ್ಪವನ್ನು ಹಸ್ತಾಂತರ ಮಾಡಲಾಗಿದೆ. ಈ ವಿಗ್ರಹವನ್ನು ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿದೆ.ಈ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಕೆಗೆ ರವಾನಿಸಲಾಗುತ್ತದೆ.
ಇಂಗ್ಲೆoಡ್ ಸೇರಿದ್ದ ಪ್ರಾಚೀನ ಯೋಗಿನಿ ವಿಗ್ರಹ ಭಾರತಕ್ಕೆ ವಾಪಸ್
- Advertisement -
- Advertisement -