Thursday, November 30, 2023

Latest Posts

ಕ್ಯಾಬಿನೆಟ್ ನಲ್ಲಿ 5 ಡಿಸಿಎಂ ಹುದ್ದೆ-ರಾಜಕೀಯದಲ್ಲೇ ಹೊಸ ಇತಿಹಾಸ…!

- Advertisement -

ಆಂಧ್ರಪ್ರದೇಶ: ರಾಜ್ಯ ಸಚಿವ ಸಂಪುಟದಲ್ಲಿ 5 ಡಿಸಿಎಂಗಳನ್ನು ನಿಯೋಜನೆ ಮಾಡೋ ಮೂಲಕ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಾಜಕಾರಣದ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.

ರಾಜ್ಯದಲ್ಲಿ ಎಲ್ಲಾ ಹಿಂದುಳಿದ ವರ್ಗಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರೋ ಸಿಎಂ ಜಗನ್ ಮೋಹನ್ ರೆಡ್ಡಿ ಸಚಿವ ಸಂಪುಟದಲ್ಲಿ ಶೋಷಿತ ವರ್ಗಗಳ ಐವರು ಡಿಸಿಎಂಗಳನ್ನು ನೇಮಕ ಮಾಡಲಿದ್ದಾರೆ. ಎಸ್ಸಿ,ಎಸ್ಟಿ, ಹಿಂದುಳಿದ ವರ್ಗ, ಮೈನಾರಿಟಿ ಹಾಗೂ ಕಾಪು ಸಮಾಜದ ವರ್ಗದವರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ.

ಅಲ್ಲದೆ ಸಚಿವ ಸ್ಥಾನಾಕಾಂಕ್ಷಿಗಳನ್ನು ಓಲೈಸೋದಕ್ಕೂ ಸಹ ಜಗನ್ ಸಖತ್ ಪ್ಲ್ಯಾನ್ ಮಾಡಿದ್ದು, ಒಂದು ಅವಧಿಗೆ 25 ಮಂದಿಗೆ ಸಚಿವ ಸ್ಥಾನ, ಹಾಗೇ ಮತ್ತೊಂದು ಅವಧಿಯಲ್ಲಿ 25 ಮಂದಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಲು ಜಗನ್ ಮೋಹನ್ ರೆಡ್ಡಿ ಪ್ಲ್ಯಾನ್ ಮಾಡಿದ್ದಾರೆ. ಈ ಮೂಲಕ ಪ್ರತಿಯೊಂದು ವರ್ಗದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋದಕ್ಕೆ ಮುಂದಾಗಿದ್ದಾರೆ.

ಸೇಲ್ಸ್ ಗರ್ಲ್ ಹಣಕಾಸು ಸಚಿವೆಯಾದ ಅದ್ಭುತ ಸ್ಟೋರಿ…!!ತಪ್ಪದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss