ಆಂಧ್ರಪ್ರದೇಶ: ಆಂಧ್ರಪ್ರದೇಶ ಸರ್ಕಾರ ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ ‘ಸ್ವೇಚ್ಛಾ’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ನೀಡಲು ನಿರ್ಧಾರ ಮಾಡಿದೆ.
7 ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ ಬೇಕಾಗಿರುವ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ನಿರ್ಧರಿಸಿದ್ದು ಇದಕ್ಕೆ ಯುನಿಸೆಫ್, ಪ್ರೋಕ್ಟರ್ ಅಂಡ್ ಗ್ಯಾಂಬಲ್ ಸಂಸ್ಥೆಯ ಸಹಭಾಗಿತ್ವ ವಹಿಸಿಕೊಂಡಿದೆ. ಇನ್ನು ಹೆಣ್ಣುಮಕ್ಕಳ ವೈಯಕ್ತಿಕ ಕಾಳಜಿ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸೋ ಸಲುವಾಗಿ ಸಿಎಂ ಜಗನ್ ಮೋಹನ್ ರೆಡ್ಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆಇನ್ನು ಈ ಯೋಜನೆಯಿಂದ ಆಂಧ್ರಪ್ರದೇಶದ ಸುಮಾರು 10 ಲಕ್ಷ ವಿದ್ಯಾರ್ಥಿನಿಯರಿಗೆ ಲಾಭ ಸಿಗಲಿದೆ.
ಸಂಪತ್ ಶೈವ, ನ್ಯೂಸ್ ಡೆಸ್ಕ್ – ಕರ್ನಾಟಕ ಟಿವಿ




