Anjali Case: ಮೊದಲೇ ದೂರು ನೀಡಿದ್ದರೂ ನಿರ್ಲಕ್ಷಿಸಿದ್ದ ಆರೋಪ: ಹುಬ್ಬಳ್ಳಿ ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಓರ್ವ ಇನ್ಸ್‌ಪೆಕ್ಟರ್ ಮತ್ತು ಓರ್ವ ಮಹಿಳಾ ಪೇದೆಯನ್ನು ಅಮಾನತು ಮಾಡಲಾಗಿದೆ.

ಹುಬ್ಬಳ್ಳಿ ಧಾರವಾಡ ಕಮಿಷನರ್ ರೇಣುಕಾ ಸುಕುಮಾರ್ ಆದೇಶ ನೀಡಿದ್ದು, ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಓರ್ವ ಮಹಿಳಾ ಪೇದೆಯನ್ನು ಅಮಾನತು ಮಾಡಲಾಗಿದೆ. ಚಿಕ್ಕೋಡಿ ಎಂಬ ಇನ್ಸ್‌ಪೆಕ್ಟರ್ ಮತ್ತು ರೇಖಾ ಎಂಬ ಮಹಿಳಾ ಪೇದೆ ಅಮಾನತುಗೊಂಡಿದ್ದಾರೆ.

ಈ ಮೊದಲೇ ಅಂಜಲಿಯ ಅಜ್ಜಿ, ಪೊಲೀಸ್ ಠಾಣೆಗೆ ಬಂದು, ನನ್ನ ಮೊಮ್ಮಗಳಿಗೆ ಕೊಲೆ ಬೆದರಿಕೆ ಬಂದಿದೆ ಎಂದು ದೂರು ನೀಡಿದ್ದರು. ಆದರೂ ಅಮಾನತಾದವರಿಬ್ಬರೂ ಈ ದೂರನ್ನು ನಿರ್ಲಕ್ಷಿಸಿದ್ದಾರೆಂಬ ಆರೋಪವಿದೆ. ಈ ಕಾರಣಕ್ಕಾಗಿ ಇವರಿಬ್ಬರನ್ನು ಪೊಲೀಸ್ ಕಮಿಷನರ್ ಅಮಾನತು ಮಾಡಿದ್ದಾರೆ.

ಅಂಜಲಿ ಕೊ* ಪ್ರಕರಣ : ಆ್ಯಂಬುಲೆನ್ಸ್ ಮುಂದೆ ಪ್ರತಿಭಟನೆ ಮಾಡಿದ ಹೋರಾಟಗಾರರು

ಹುಬ್ಬಳ್ಳಿ ಅಂಜಲಿ ಹಂತಕನ ಪತ್ತೆಗೆ ಎರಡು ವಿಶೇಷ ತಂಡ ರಚನೆ, ಪೊಲೀಸ್ ಆಯುಕ್ತೆ ಹೇಳಿದ್ದೇನು?

ಹುಬ್ಬಳ್ಳಿ ಅಂಜಲಿ ಹ*ಗೆ ನೇರವಾಗಿ ಸರ್ಕಾರ ವೈಫಲ್ಯವೇ ಕಾರಣ- ಮಹೇಶ ಟೆಂಗಿನಕಾಯಿ…

About The Author