ಆ್ಯಂಕರ್ ಅನುಶ್ರೀ ಕಲ್ಯಾಣೋತ್ಸವ, ಅದ್ಧೂರಿಯಾಗಿ ನೆರವೇರಿದೆ. ಕೆಲ ದಿನಗಳಿಂದ ಅನುಶ್ರೀ ಮದುವೆ ಬಗ್ಗೆ ಗಾಸಿಪ್ ಜೋರಾಗಿತ್ತು. ಆದ್ರೆ ಅನುಶ್ರೀ ಮಾತ್ರ ಎಲ್ಲಿಯೂ ಈ ಬಗ್ಗೆ ರಿವೀಲ್ ಮಾಡಿರ್ಲಿಲ್ಲ. ಮದುವೆ ಆಗ್ತಿದ್ದಾರಾ?. ಲವ್ ಮ್ಯಾರೇಜಾ? ಅರೆಂಜ್ ಮ್ಯಾರೇಜಾ?. ಹುಡುಗ ಯಾರು? ಪರಿಚಯ ಹೇಗಾಯ್ತು?. ಫಸ್ಟ್ ಪ್ರಪೋಸ್ ಮಾಡಿದ್ಯಾರು?. ಹೀಗೆ ಅಭಿಮಾನಿಗಳಲ್ಲಿ ಸಾಲು ಸಾಲು ಪ್ರಶ್ನೆಗಳು ಮೂಡಿದ್ವು. ಆದರೆ, ಅನುಶ್ರೀ ಮಾತ್ರ ತುಟಿಕ್ ಪಿಟಿಕ್ ಎಂದಿರಲಿಲ್ಲ..
ಮದುವೆ ಬಳಿಕ ಮೊದಲ ಬಾರಿಗೆ ಅನುಶ್ರೀ, ತಮ್ಮ ಲವ್ ಸ್ಟೋರಿ, ಮದುವೆ ಕನಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮದುವೆ ಬಹಳ ಸುಂದರವಾಗಿ ಸರಳವಾಗಿ ನಡೀತು. ಕಡಿಮೆ ಜನರ ಎದುರು ನಮ್ಮಿಬ್ಬರ ವಿವಾಹ ಆಗಬೇಕೆಂಬುದು, ನಮ್ಮಿಬ್ಬರ ಆಸೆ ಆಗಿತ್ತು. ಇದು ತುಂಬಾ ಸರಳ ವಿವಾಹ.
ಇವರ ಹೆಸರು ರೋಷನ್ ರಾಮಮೂರ್ತಿ. ಕುಶಾಲನಗರದವರು. ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾರೆ. ಸಿಂಪಲ್ ಹುಡುಗ. ಈ ಹುಡುಗೀನ ಮದುವೆ ಆಗಿದ್ದಾರೆ. ನಮ್ಮಿಬ್ಬರ ಲವ್ ಸ್ಟೋರಿಯನ್ನ ಯಾರು ಹೇಳಿದ್ರೂ ನಂಬಲ್ಲ. ಹೀಗಾಗಿ ನಾವು ಹೇಳುವುದಕ್ಕೆ ಹೋಗಲ್ಲ.ನಮ್ಮಿಬ್ಬರದ್ದು ಸಿಂಪಲ್ ಲವ್ ಸ್ಟೋರಿ. ನಾವಿಬ್ಬರು ಫ್ರೆಂಡ್ಸ್ ಆದ್ವಿ. ಕಾಫಿ ಕುಡಿದ್ವಿ. ನಂಗೆ ಅವರು ಇಷ್ಟ ಆದ್ರು. ಅವರಿಗೆ ನಾನು ಇಷ್ಟ ಆದೆ. ಲವ್ ಆಯ್ತು ಮದುವೆ ಆದ್ವಿ.
ಹೀಗಂತ ಅನುಶ್ರೀ ತಮ್ಮ ಲವ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಇಷ್ಟು ದಿನ ಗುಬ್ಬಚ್ಚಿ ಗೂಡಿನಲ್ಲಿದ್ದ ಅನುಶ್ರೀ ಪ್ರೀತಿಯ ಗುಟ್ಟು ಇದೀಗ ರಿವೀಲ್ ಆಗಿದೆ.