Tuesday, October 22, 2024

Latest Posts

ಆ್ಯಪಲ್ ಕಂಪನಿ ಭಾರತದಲ್ಲಿ ಭರ್ಜರಿ ಬಂಡವಾಳ ಹೂಡಿಕೆಗೆ ಮುಂದಾಗಿದೆ : 1 ಮಿಲಿಯನ್ ಉದ್ಯೋಗ ಸೃಷ್ಟಿ

- Advertisement -

ದೆಹಲಿ: ಆ್ಯಪಲ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿಕೆ ಮಾಡುತ್ತಿದೆ. ಈಗ ಮತ್ತೊಂದು ಹೆಜ್ಜೆಯನ್ನು ಭಾರತದಲ್ಲಿ ಮುಂದಿಟ್ಟಿರುವ ಆ್ಯಪಲ್ ಕಂಪನಿ, ದೇಶದಲ್ಲಿ ಸುಮಾರು ಒಂದು ಮಿಲಿಯನ್ ಉದ್ಯೋಗವನ್ನು ನೀಡುವತ್ತ ಗಮನಹರಿಸಿದೆ ಅಂತ ಕಂಪನಿಯ ಉಪಾಧ್ಯಕ್ಷ ಪ್ರಿಯಾ ಬಾಲಸುಬ್ರಮಣ್ಯಂ ಗುರುವಾರ ಹೇಳಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆ 2021 ರಲ್ಲಿ ಮಾತನಾಡಿದ ಬಾಲಸುಬ್ರಮಣ್ಯಂ, ಆ್ಯಪಲ್ ಭಾರತದಲ್ಲಿ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ ಇದರ ನಡುವೆ ನಾವು 2017 ರಲ್ಲಿ ಬೆಂಗಳೂರಿನಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆವು.
ದೇಶೀಯ ಮಾರುಕಟ್ಟೆಗಾಗಿ ಮತ್ತು ರಫ್ತುಗಾಗಿ ಹಲವಾರು ಐಫೋನ್ ಮಾದರಿಗಳನ್ನು ತಯಾರಿಸುತ್ತಿದ್ದೇವೆ. ನಮ್ಮ ಪೂರೈಕೆಯ ಸರಪಳಿಯ ಜೊತೆಗೆ, ನಮ್ಮ ಕಾರ್ಯಾಚರಣೆಗಳನ್ನು ಅಭಿವೃದ್ಧಿಪಡಿಸಲು, ಸ್ಥಳೀಯ ಪೂರೈಕೆದಾರರೊಂದಿಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ತೊಡಗಿಸಿಕೊಳ್ಳಲು ನಾವು ಭಾರತದಲ್ಲಿ ಗಣನೀಯವಾಗಿ ಹೂಡಿಕೆ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.

- Advertisement -

Latest Posts

Don't Miss