- Advertisement -
ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನಸಾಮಾನ್ಯರು ಅಸ್ಥವ್ಯಸ್ಥರಾಗಿದ್ದಾರೆ , ಇನ್ನೂ ಈ ಮಳೆಯ ಬಿಸಿ ಚಾಮರಾಜನಗರಕ್ಕೂ ಸಹ ಬಿಟ್ಟಿಲ್ಲ . ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ಬುಧವಾರದಿಂದ ಬಾರೀ ಮಳೆ ಸುರಿದಿದೆ , ಈ ಅತಿಯಾದ ಮಳೆಯ ನೀರು ಗ್ರಾಮದೊಳಗೆ ನುಗ್ಗಿ ಬಾರಿ ಅವಾಂತರವನ್ನು ಸೃಷ್ಟಿ ಮಾಡಿದೆ .
ಇನ್ನೂ ಚರಂಡಿ , ಕಾಲುವೆಗಳಿದ್ದರೂ ಸಹ ನೀರಿನ ಮಟ್ಟ- ಜೋರಾಗಿದೆ ,ಗ್ರಾಮಸ್ಥರು ಮಳೆಯ ನೀರಿನಿಂದ ಪಾರಾಗಲು ರೋದನೆ ಪಡುತ್ತಿದ್ದಾರೆ ,
ರೈತರು ಬೆಳೆದ ಅಪಾರ ಪ್ರಮಾಣದ ಬಾಳೆ,ತೆಂಗಿನ ತೋಟಗಳಿಗೆ ನೀರು ನುಗ್ಗುತ್ತಿದ್ದು , ತೋಟಗಳೆಲ್ಲ ನೀರಿನಿಂದ ಜಲಾವೃತಗೊಂಡಿವೆ .
- Advertisement -