Hubli News: ಹುಬ್ಬಳ್ಳಿ: ನಿಧಾನ ಗತಿಯಲ್ಲಿ ಚಲಿಸುತ್ತಿದ್ದ ಕಾರಿಯೊಂದಕ್ಕೆ ಮತ್ತೊಂದು ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಗದಗ ರಸ್ತೆಯ ಐಟಿಸಿ ಮುಂಭಾಗದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ನಿಧಾನಗತಿಯ ಲಾರಿಗೆ ಹಿಂಬದಿಯಿಂದ ಐಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಐಸರ್ ಲಾರಿಯಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಕೇಶ್ವಾಪೂರ ಸಂಚಾರ ಠಾಣೆಯ ಪೊಲೀಸರು ರಾತ್ರಿ 11:30 ಗಂಟೆಯಿಂದ 2 ಗಂಟೆವರೆಗೆ ರಸ್ತೆಯಲ್ಲಿ ಅಪಘಾತಕ್ಕೆ ಈಡಾದ ವಾಹನಗಳನ್ನು ತೆರವು ಗೊಳಿಸಿ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಕೇಶ್ವಾಪೂರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..
ಮಾಸ್ಕೋ ಮಾಲ್‌ನಲ್ಲಿ ದಾಳಿ ಬಗ್ಗೆ ಆಕ್ರೋಶ ಹೊರಹಾಕಿದ ರಷ್ಯಾ ಅಧ್ಯಕ್ಷ ಪುಟಿನ್