Thursday, July 31, 2025

Latest Posts

Aravind bellad : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದೇಶ ದ್ರೋಹಿಗಳಿಗೆ ಬಲ ಬಂದಿದೆ..!

- Advertisement -

ಶಿವಮೊಗ್ಗದಲ್ಲಿ ಶಾಂತಿ ಕಲಡುವ ವಿಚಾರ ನಡೆದಿದೆ. ಈದ್ ಮಿಲಾದ್ ದಿನ ಇಂತಹ ಪರಿಸ್ಥಿತಿ ನಿರ್ಮಾಣವಾಗಿ ಮತ್ತೆ ಅಶಾಂತಿ ಕಂಡುಬರುತ್ತಿದೆ. ಈ ವಿಚಾರವಾಗಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ಒಂದನ್ನು ಕೊಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಈದ್ ಮಿಲಾದ್ ದಿನ ಕಲ್ಲು ತೂರಾಟ ವಿಚಾರವಾಗಿ ಪರಿಸ್ಥಿತಿ ಉದ್ವಿಘ್ನವಾಗಿದ್ದು ಸೆಕ್ಶನ್ ಕೂಡಾ ಜಾರಿ ಮಾಡಲಾಗಿದೆ. ಈ ವಿಚಾರವಾಗಿ ಧಾರವಾಡದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗ ದೇಶದ್ರೋಹಿ ಶಕ್ತಿಗಳಿಗೆ ಬಲ ಬಂದಂಗೆ ಆಗುತ್ತೆ, ಇಷ್ಟು ದಿನ ಮಲಗಿದ್ದ ಇವರು, ಸರ್ಕಾರ ಬಂದಮೇಲೆ ಫ್ರೀಡಂ ಸಿಗುವ ಮನಸ್ಥಿತಿ ಬರುತ್ತೆ. ಈ ಶಕ್ತಿಗಳ ಮೇಲೆ ಶೀಘ್ರದಲ್ಲೇ ರಾಜ್ಯ ಸರ್ಕಾರ ಹಾಗೂ ಸಿಎಂ ಸರಿಯಾದ ಕ್ರಮಕೈಗೊಳ್ಳೋದು ಬಹಳ ಅವಶ್ಯ ಇದೆ. ಈ ರೀತಿಯ ಶಕ್ತಿಯನ್ನ ಸಹಿಸೋದಿಲ್ಲ ಅನ್ನೋ ಸಂದೇಶ ಕೊಡಬೇಕು. ಸರ್ಕಾರ ಬಂದಮೇಲೆ ಅವರನ್ನ ರಿಲೀಸ್ ಮಾಡ್ತೀವಿ ಇವರನ್ನ ಮಾಡ್ತೀವಿ ಅನ್ನೋ ತೀರ್ಮಾನ ಮಾಡ್ತಾರೆ.

ಈ ರೀತಿಯ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟ ಹಾಗೆ ಆಗುತ್ತದೆ ಎಂದು ಹೇಳಿದ್ದಾರೆ.ಇದರ ಜೊತೆಗೆ ಶಿವಮೊಗ್ಗ ಅಲ್ಲದೆ ಇಡೀ ರಾಜ್ಯದಲ್ಲಿ ಈ ರೀತಿಯ ಶಕ್ತಿಗಳು ಎದ್ದು ಕುಂತಿವಿ, ಅವುಗಳನ್ನ ಮಟ್ಟ ಹಾಕ್ತೀವಿ ಅನ್ನೋ ಸಿಗ್ನಲ್ ಕೊಡೋದು ಮುಖ್ಯ, ಸಿಎಂ ಗೆ ನಾವು ಒತ್ತಾಯ ಮಾಡ್ತೀವಿ,ಶಾಂತವಾಗಿರುವ ಕರ್ನಾಟಕವನ್ನ ಶಾಂತವಾಗಿರಿಸಿ ಬೇಕಂತಲೇ ಈ ರೀತಿಯ ವಿಷಯಗಳನ್ನ ಕ್ರಿಯೇಟ್ ಮಾಡೋಕೆ ನೋಡ್ತಾರೆ. ಎಂಬುವುದಾಗಿ ಶಾಸಕ ಹೇಳಿಕೆಯನ್ನು ಕೊಟ್ಟಿದ್ದಾರೆ.

ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂಬ ಈಶ್​ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸವದಿ

School : ಶಿರಗುಪ್ಪಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಲು ʼಬಣ್ಣದರ್ಪಣೆʼ ಅಭಿಯಾನ

ಪೇಶಾವರ ಶ್ರೀಗಳ ಹೇಳಿಕೆಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್ ; ಏನದು ಹೇಳಿಕೆ ?

- Advertisement -

Latest Posts

Don't Miss