Sunday, April 13, 2025

Latest Posts

ಸಿಐಡಿ ಡಿಜಿ ಎಂ ಸಲೀಂ ಆಗಮನ – ಅಂಜಲಿ ಹಂತಕ ವಿಶ್ವನ ವಿಚಾರಣೆ ಸಾಧ್ಯತೆ

- Advertisement -

Hubli News: ಹುಬ್ಬಳ್ಳಿ : ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದ ಹಿನ್ನೆಲೆ ಅಧಿಕಾರಿಗಳು ನಗರದಲ್ಲಿ ಎರಡು ಪ್ರಕರಣದ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ 9 ಜನ ಅಧಿಕಾರಿಗಳ ತಂಡ ಈ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಇಂದು ನಗರಕ್ಕೆ ಈ ಎರಡು ಪ್ರಕರಣಗಳ ತನಿಖೆ ಹಂತ ಹಾಗೂ ಇದರ ಸಮಗ್ರ ಮಾಹಿತಿಯನ್ನು ಪಡೆಯುವ ಸಲುವಾಗಿಯೇ ಸಿಐಡಿ ಡಿಜಿ ಎಂ.ಸಲೀಂ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸಿಐಡಿ ಅಧಿಕಾರಿಗಳಿಂದ ಪ್ರಕರಣದ ಸಮಗ್ರ ಮಾಹಿತಿ ಪಡೆಯಲಿದ್ದಾರೆ.

ಅಷ್ಟೇ ಅಲ್ಲದೆ, ಅಂಜಲಿ ಕೊಲೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ನನ್ನು ಕೂಡಾ ಇದೀಗ ದೇಶಪಾಂಡೆ ನಗರದ ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಬಂದಿದ್ದು, ಡಿಜಿ ಸಲೀಂ ಮುಂದೆ ಆರೋಪಿ ವಿಶ್ವನನ್ನು ವಿಚಾರಣೆ ಮಾಡುವ ಸಾಧ್ಯತೆ ಕೂಡಾ ಇದೆ.

ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ, ಎಲ್ಲರಿಗೂ ಮಾದರಿಯಾದ ವ್ಯಕ್ತಿ

Prajwal Pen drive Case: ಕೊನೆಗೂ ಪ್ರತ್ಯಕ್ಷರಾದ ಪ್ರಜ್ವಲ್ ರೇವಣ್ಣ

21 ದಿನಗಳ ಪೂಜೆಗೆಂದು ಭಕ್ತನಿಂದ ನವರತ್ನ ಉಂಗುರ ಪಡೆದು ಗಿರವಿ ಇಟ್ಟ ಪೂಜಾರಿ

- Advertisement -

Latest Posts

Don't Miss