www.karnatakatv.net :ಬೆಂಗಳೂರು:14ರಂದು ಚಿತ್ರ ಮಂದಿರಗಳಿಗೆ ಬರಲಿರೋ ” ಕೋಟಿಗೊಬ್ಬ – 3 ” ಚಿತ್ರದ ಸುದ್ದಿಗೋಷ್ಠಿ ಇಂದು ರೇಣುಕಾಂಬ ಥಿಯೇಟರ್ ನಲ್ಲಿ ಆಯೋಜಿಸಲಾಗಿತ್ತು. ಆರುಮುಗ ರವಿಶಂಕರ್, ಚಿತ್ರದ ನಾಯಕಿ ಮಡೋನ ಹಾಗೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿರುವ ಅಭಿರಾಮಿ ಭಾಗವಹಿಸಿದ್ದರು.
ಇನ್ನೂ ಅಭಿರಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದೇನೆ, ನನಗೂ ಆಕ್ಷನ್ ಸೀನ್ ಗಳಿವೆ, ಮೊದಲ ಬಾರಿ ಸುದೀಪ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ, ಆದರೆ ಸುದೀಪ್ ಜೊತೆ ನಟಿಸಿಲ್ಲ, 14 ರಂದು ಚಿತ್ರ ತೆರೆಮೇಲೆ ಬರಲಿದೆ ಎಂದು ಹೇಳಿದರು.
ನಂತರ ಚಿತ್ರದ ನಾಯಕಿ ಮಡೋನ ಮಾತನಾಡಿ, ಮೊದಲಬಾರಿ ಕನ್ನಡ ಚಿತ್ರದಲ್ಲಿ ಆಕ್ಟ್ ಮಾಡಿದ್ದು ಹಾಗೂ ಅದು ಕೂಡ ಸುದೀಪ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದು ಖುಷಿಯಾಗಿದೆ, ಯುರೋಪ್ ದೇಶಗಳಲ್ಲಿ ಮತ್ತು ಪಾಂಡಿಚೆರಿ ಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವನ್ನು ನೋಡಿ ಹರಸಿ ಎಂದು ಹೇಳಿದರು.
ಕೊನೆಯದಾಗಿ ಮಾತನಾಡಿದ ಆರುಮುಗ ರವಿಶಂಕರ್, ಇದು ಪಕ್ಕ ಎಂಟರ್ಟೈನ್ಮೆಂಟ್ ಚಿತ್ರ , ಕೋಟಿಗೊಬ್ಬ-2 ಚಿತ್ರದಲ್ಲಿನ ಕಿಶೋರ್ ಪಾತ್ರವನ್ನೇ ನಾನು ಮುಂದುವರಿಸಿದ್ದೇನೆ , ಹೊರ ದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ, ಸುದೀಪ್ ಅವರ ಶಿವ – ಸತ್ಯ ಪಾತ್ರಗಳು ಇಲ್ಲು ಕೂಡ ಮನೋರಂಜನೆ ನೀಡಲಿದೆ. ನಾನು ಫಸ್ಟ್ ಡೇ, ಫಸ್ಟ್ ಶೋ ಅಭಿಮಾನಿಗಳ ಜೊತೆ ಚಪ್ಪಾಳೆ, ವಿಷಲ್ ಹಾಕಿ ಚಿತ್ರ ನೋಡ್ತೀನಿ, ನೀವು ಮಿಸ್ ಮಾಡದೆ ಸಿನೆಮಾ ನೋಡಿ. ಅಂದೆ ಕೂಡ ಸಲಗ ಚಿತ್ರ ಬರ್ತಿದೆ, ಆ ಸಿನಿಮಾಕ್ಕೂ ಒಳ್ಳೆಯದಾಗಲಿ. ಎಂಬ ಮಾತುಗಳನ್ನು ಹೇಳಿದ್ದಾರೆ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ