ಹಾಸನ: ಸರ್ಕಾರಿ ನೌಕರರ ಕುಟುಂಬಕ್ಕೆ ಹಾಲಿ ಮತ್ತು ನಿವೃತ್ತ ನೌಕರರ ಕುಟುಂಬಕ್ಕೆ ಭವಾನಿ ಅಕ್ಕನವರ ಮಾತಿನಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು, ಕೂಡಲೇ ಕ್ಷಮೆಯನ್ನು ಕೇಳಬೇಕು ಎಂದು ರಾಧಮ್ಮ ಜನಸ್ಪಂದನಾ ಸಂಸ್ಥಾಪಕರಾದ ಬಿ.ಎನ್. ಹೇಮಂತ್ ಕುಮಾರ್ ಆಗ್ರಹಿಸಿದರು..
ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶ…
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜಕಾರಣಕೋಸ್ಕರ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಸರ್ಕಾರಿ ನೌಕರರನ್ನು ಗುರಿ ಮಾಡುವುದು, ರಾಜಕಾರಣ ಮಾಡುವುದು, ಇದು ಭವಾನಿ ಅಕ್ಕನವರ ಕುಟುಂಬ ನಡೆಯಾಗಿದೆ. ಇಂತಹ ಮನಸ್ಥಿತಿಯನ್ನು ಮೊದಲು ಬದಲಾವಣೆ ಮಾಡಿಕೊಳ್ಳಬೇಕು. ನಿಮ್ಮ ರಾಜಕಾರಣಕ್ಕೆ ನಾವು ವಿರೋಧವನ್ನು ಮಾಡುವುದಿಲ್ಲ. ಆದರೆ ಸರ್ಕಾರಿ ನೌಕರರನ್ನು ಅವರ ಕುಟುಂಬಕ್ಕೆ ಅವಮಾನವಾಗುವ ರೀತಿ ವರ್ತಿಸುವುದನ್ನು ನಾವು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದರಿಂದ ನಿಮ್ಮನ್ನು ವಿರೋಧ ಮಾಡಲೇಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಎಸಿ ಮತ್ತು ಜಿಲ್ಲಾಧಿಕಾರಿ ಪೊಲೀಸ್ ಇಲಾಖೆ ಸರ್ಕಲ್ ಇನ್ಸ್ಕ್ಟರ್ ಹಾಗೂ ಉದಯ ಭಾಸ್ಕರ್ ಪ್ರತಿಯೊಬ್ಬರಿಗೂ ತಾವು ಬಳಸಿರುವ ಪದಗಳು ಅವರ ಕುಟುಂಬದವರಿಗೂ ಕೂಡ ನೋವನ್ನುಂಟು ಮಾಡಿದೆ ನೀವು ಜನಪ್ರತಿನಿಧಿಗಳು ಸರ್ಕಾರಿ ನೌಕರರ ಕರ್ತವ್ಯ ಲೋಪವನ್ನು ಮಾಡಿದರೆ ಕ್ರಮವನ್ನು ಕೈಗೊಳ್ಳಿ. ಆದರೆ ಬಳಸುವ ಪದಗಳಿಂದ ಅವರ ಕುಟುಂಬಕ್ಕೆ ಮತ್ತು ಅವರಿಗೆ ವೈಯಕ್ತಿಕವಾಗಿ ತೇಜೋವಧೆಯನ್ನು ಮಾಡಬೇಡಿ ಎಂದರು.
ವಿಶೇಷ ಚೇತನ ಮಕ್ಕಳ ಜೊತೆ ಬಿಜೆಪಿಯಿಂದ ಬಿ.ವೈ. ವಿಜಯೇಂದ್ರ ಜನ್ಮದಿನ ಆಚರಣೆ..
ಅಲ್ಲದೇ, ಈಗ ನೀವು ಹಾಸನದ ಶಾಸಕರಾದ ಪ್ರೀತಂ ಜೆ ಗೌಡರ ತಂದೆ ನಿವೃತ್ತ ನೌಕರರು ಅವರನ್ನು ಕೂಡ ತೇಜೋವಧೆಯನ್ನು ಮಾಡಲು ಕೀಳಾಗಿ ಮಾತನಾಡಿದ್ದೀರಾ ರಾಜಕಾರಣದ ದೃಷ್ಟಿಯಿಂದ ಈ ರೀತಿ ನೀವು ನಡೆದುಕೊಳ್ಳುತ್ತಿರುವ ರೀತಿಯಿಂದ ಮುಂದೆ ನಿಮಗೆ ಹಾಸನ ಜಿಲ್ಲೆಯಲ್ಲಿ ಇರುವ ಪ್ರತಿಯೊಬ್ಬ ಸರ್ಕಾರಿ ನೌಕರರ ಕುಟುಂಬವು ವಿರೋಧವನ್ನು ಮಾಡುತ್ತದೆ, ತಕ್ಷಣವೇ ನೀವು ನಮ್ಮ ಎಚ್ಚರಿಕೆ ಅರಿತುಕೊಂಡು ನಿಮ್ಮ ತಪ್ಪುಗಳಿಗೆ ನಿವೃತ್ತ ನೌಕರರಾದ ಹಾಸನ ಶಾಸಕರ ತಂದೆಯವರಿಗೆ ಮತ್ತು ಸರ್ಕಾರಿ ನೌಕರರಿಗೆ ಕ್ಷಮೆಯನ್ನು ಕೇಳಬೇಕೆಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಜಯ್, ಕೌಶಿಕ್, ವಕೀಲರಾದ ವಿಶ್ವನಾಥ್ ಇತರರು ಉಪಸ್ಥಿತರಿದ್ದರು.