- Advertisement -
೨೦೧೯-೨೦ ರ ಪ್ರತಿಷ್ಠಿತ ದೇಸಿ ಕ್ರಿಕೆಟ್ ಟೂರ್ನಿ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ, ಬಿಸಿಸಿಐ ತಂಡ ಪ್ರಕಟಿಸಿದೆ. ಟ್ರೋಫಿಗಾಗಿ ಇಂಡಿಯಾ ರೆಡ್, ಇಂಡಿಯಾ ಬ್ಯೂ ಮತ್ತು ಇಂಡಿಯಾ ಗ್ರೀನ್ ತಂಡಗಳು ಸೆಣಸಲಿದ್ದು, ಭವಿಷ್ಯದಲ್ಲಿ ರಾಷ್ಟ್ರೀಯ ತಂಡದಲ್ಲಿ ಮಿಂಚುವ ನಿರೀಕ್ಷೆ ಮೂಡಿಸಿರುವ ಯುವ ಕ್ರಿಕೆಟಿಗರಿಗೆ ನಾಯಕ ಸ್ಥಾನ ನೀಡಲಾಗಿದೆ. ಕಳೆದ ಬಾರಿಯ ಅಂಡರ್-೧೯ ವಿಶ್ವಕಪ್ ಹೀರೋ ಶುಬ್ ಮನ್ ಗಿಲ್, ಇಂಡಿಯಾ ಬ್ಲೂ ತಂಡವನ್ನ ಮುನ್ನಡೆಸುತ್ತಿದ್ರೆ, ಫಯಾಜ್ ಫಜಲ್, ಇಂಡಿಯಾ ಗ್ರೀನ್ ತಂಡವನ್ನು ಮತ್ತು ಪ್ರಿಯಾಂಕ್ ಪಾಂಚಲ್, ಇಂಡಿಯಾ ರೆಡ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಇನ್ನೂ ಇದೇ 17 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಟೂರ್ನಿ, ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ.
- Advertisement -