Saturday, July 27, 2024

Latest Posts

ಹೊಟ್ಟೆ ನೋವಿನ ಜೊತೆ ವಾಂತಿ ಹಾಗೂ ಸುಸ್ತು ಇದ್ದಲ್ಲಿ ಎಚ್ಚರ..

- Advertisement -

Health Tips: ಸಾಮಾನ್ಯವಾಗಿ ಎಲ್ಲರಿಗೂ ಆಹಾರ ಸೇವನೆಯಲ್ಲಿ ಏರುಪೇರಾದಾಗ, ಹೊಟ್ಟೆ ನೋವಿನ ಸಮಸ್ಯೆ ಬರುವುದು ಕಾಮನ್. ಆದರೆ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ವಾಸಿಯಾಗಿಲ್ಲ. ಅಥವಾ ಹೊಟ್ಟೆ ನೋವಿನೊಂದಿಗೆ, ವಾಂತಿ ಮತ್ತು ಸುಸ್ತು ಇದ್ದಲ್ಲಿ, ಅದು ಸಾಮಾನ್ಯ ಸಮಸ್ಯೆಯಾಗಿರುವುದಿಲ್ಲ. ಹಾಗಾದ್ರೆ ಯಾಕೆ ಹೊಟ್ಟೆ ನೋವಿನೊಂದಿಗೆ ವಾಂತಿ ಮತ್ತು ಸುಸ್ತು ಇರಬಾರದು ಅಂತಾ ತಿಳಿಯೋಣ ಬನ್ನಿ..

ಪಿತ್ತಕೋಶದಲ್ಲಿ ನೋವುಂಟಾದಾಗ ಹೊಟ್ಟೆಯ ಬಲಭಾಗದಲ್ಲಿ ನೋವುಂಟಾಗುತ್ತದೆ. ಸರಿಯಾಗಿ ಊಟ ಸೇರುವುದಿಲ್ಲ. ಪಿತ್ತಕೋಶದ ಗ್ಯಾಂಗ್ರಿನ್, ಅಥವಾ ಪಿತ್ತಕೋಶದಲ್ಲಿ ಏನೇ ಸಮಸ್ಯೆ ಆದರೂ ಕೂಡ, ಹೊಟ್ಟೆಯ ಬಲಭಾಗದಲ್ಲಿ ನೋವುಂಟಾಗುತ್ತದೆ. ಸುಸ್ತಾಗುತ್ತದೆ. ಸರಿಯಾಗಿ ದೇಹದಲ್ಲಿರುವ ಕಸ ಹೊರಗೆ ಹೋಗುವುದಿಲ್ಲ.

ಆದರೆ ಕರುಳಿನಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ, ವಾಂತಿಯಾಗುತ್ತದೆ. ಸುಸ್ತು ಉಂಟಾಗುತ್ತದೆ. ಕರಳು ಬ್ಲಾಕೇಜ್ ಆದಾಗ, ದೇಹದಲ್ಲಿ ರಕ್ತಸಂಚಾರ ಸರಿಯಾಗಿ ಆಗುವುದಿಲ್ಲ. ಸುಸ್ತು, ವಾಂತಿ, ಹೊಟ್ಟೆ ನೋವು, ಈ ರೀತಿ ಸಮಸ್ಯೆಗಳು ಹೆಚ್ಚಾದಾಗ, ನೀವು ವೈದ್ಯರ ಬಳಿ ಹೋಗಿ, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಇದು ಕೊನೆಯ ಹಂತಕ್ಕೆ ಹೋದಾಗ, ವೈದ್ಯರು ಆ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಿ, ನಿಮ್ಮ ಪ್ರಾಣ ಕಾಪಾಡಲು ಸಾಧ್ಯವಾಗುವುದು ಕಷ್ಟವಾಗಬಹುದು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss