Wednesday, December 4, 2024

Latest Posts

ಈ ಕಲರ್ ಕಲರ್ ಐಸ್‌ ಕ್ಯೂಬ್ಸ್ ಬಳಸಿ ನಿಮ್ಮ ಮುಖವನ್ನು ಅಂದಗೊಳಿಸಿ

- Advertisement -

Beauty Tips: ವಾರಕ್ಕೊಮ್ಮೆ ಫೇಸ್‌ಪ್ಯಾಕ್, ಕ್ರೀಮ್, ಲೋಶನ್, ಸ್ಕ್ರಬ್ ಏನೂ ಬಳಸದೇ, ನೀವು ಪ್ರತಿದಿನ ಐಸ್‌ಕ್ಯೂಬ್ ಬಳಸಿದರೂ ಕೂಡ, ನಿಮ್ಮ ತ್ವಚೆಯ ಅಂದ ಹೆಚ್ಚುತ್ತದೆ.

ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್‌ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ನಾವು ಈ ಮೊದಲೇ ಐಸ್ ಫೇಶಿಯಲ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ, ಇದು ಬಾಲಿವುಡ್ ಖ್ಯಾತ ತಾರೆ ಕತ್ರೀನಾ ಕೈಫ್ ಬ್ಯೂಟಿ ಸಿಕ್ರೇಟ್ ಕೂಡಾ ಹೌದು. ಹಲವು ನಟಿಮಣಿಯರು ಬೆಳಿಗ್ಗೆ ಐಸ್ ಕ್ಯೂಬ್ಸ್‌ನಿಂದ ತಮ್ಮ ಮುಖವನ್ನ ರಬ್ ಮಾಡಿಕೊಂಡೇ ತಮ್ಮ ದಿನ ಶುರು ಮಾಡ್ತಾರೆ. ನೀವು ಕೂಡ ಪ್ರತಿನಿತ್ಯ ಬೆಳಿಗ್ಗೆ ಐಸ್‌ಕ್ಯೂಬ್‌ನಿಂದ ನಿಮ್ಮ ಮುಖವನ್ನ ರಬ್ ಮಾಡಿಕೊಂಡ್ರೆ ನಿಮ್ಮ ಸ್ಕಿನ್ ಹೊಳೆಯುವುದ್ರಲ್ಲಿ ನೋ ಡೌಟ್.

ಬೀಟ್‌ರೂಟ್ ಐಸ್‌ ಕ್ಯೂಬ್ಸ್ : ಬೀಟ್‌ರೂಟ್‌ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನ ಕೇಳಿರ್ತಿವಿ. ಆದ್ರೆ ಸೌಂದರ್ಯ ಇಮ್ಮಡಿಗೊಳಿಸೋಕ್ಕೂ ಕೂಡ ಬೀಟ್‌ರೂಟ್ ಸಹಕಾರಿ. ಕ್ಯಾರೇಟ್- ಬೀಟ್ರೂಟ್‌ ಜ್ಯೂಸ್ ಕುಡಿಯುವುದರಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತೆ. ಹಾಗೆಯೇ ಬೀಟ್‌ರೂಟ್‌ನಿಂದ ಮಾಡಿದ ಐಸ್‌ ಕ್ಯೂಬ್‌ನಿಂದ ನಿಮ್ಮ ಮುಖ ರಬ್ ಮಾಡಿದ್ರೆ, ಪಿಂಕ್ ಪಿಂಕ್ ಫೇಸ್ ನಿಮ್ಮದಾಗತ್ತೆ.

ಒಂದು ಬೀಟ್‌ರೂಟನ್ನ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ. ನಂತರ ಬೀಟ್ರೂಟ್‌ ತುರಿದು, ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿ. ಈಗ ಈ ಬೀಟ್‌ರೂಟ್ ಪೇಸ್ಟ್‌ಗೆ ಎರಡು ಸ್ಪೂನ್ ನಿಂಬೆರಸ ಮತ್ತು ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಹಾಕಿ ಕದಡಿ. ಈಗ ಈ ಮಿಶ್ರಣವನ್ನು ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ, ಫ್ರಿಜರ್‌ನಲ್ಲಿರಿಸಿ ಐಸ್ ಕ್ಯೂಬ್ ತಯಾರಿಸಿ. ಪ್ರತಿದಿನ ಈ ಐಸ್ ಕ್ಯೂಬ್‌ನಿಂದ ಫೇಸ್‌ ಮಸಾಜ್ ಮಾಡಿ.

ಟೊಮೆಟೋ ಐಸ್ ಕ್ಯೂಬ್ಸ್ : ಎರಡು ಟೊಮೆಟೋ ತೆಗೆದುಕೊಂಡು ಅದನ್ನ ಚೆನ್ನಾಗಿ ತೊಳೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳಿಗೆ ನೀರು ಹಾಕದೇ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ಈ ಮಿಶ್ರಣಕ್ಕೆ ಅರ್ಧ ಚಮಚ ಅರಿಷಿಣ ಪುಡಿ, ಒಂದು ಸ್ಪೂನ್ ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಐಸ್ ಕ್ಯೂಬ್ಸ್ ತಯಾರಿಸಿ ಪ್ರತಿದಿನ ಉಪಯೋಗಿಸಿ.

ನಿಂಬೆಹಣ್ಣಿನ ಐಸ್‌ ಕ್ಯೂಬ್ಸ್ : ಒಂದು ನಿಂಬೆಹಣ್ಣನ್ನ ತುರಿದು, ಆ ತುರಿದ ಸಿಪ್ಪೆಯ ಮಿಶ್ರಣವನ್ನ ಸಪರೇಟ್ ಆಗಿರಿಸಿ. ಸಣ್ಣ ಕಪ್ ಆ್ಯಲೋವೇರಾ ಜ್ಯೂಸ್, ಒಂದು ಸ್ಪೂನ್ ಆ್ಯಲೋವೇರಾ ಜೆಲ್, ಒಂದು ವಿಟಮಿನ್ ಈ ಕ್ಯಾಪ್ಸೂಲ್ ಈ ಎಲ್ಲ ಮಿಶ್ರಣವನ್ನು ಸೇರಿ ತಯಾರಿಸಿದ ರಸವನ್ನು ಐಸ್ ಕ್ಯೂಬ್‌ ಟ್ರೇಗೆ ಹಾಕಿ. ಇದರ ಮೇಲೆ ತುರಿದ ನಿಂಬೆಹಣ್ಣಿನ ಸಿಪ್ಪೆಯನ್ನ ಉದುರಿಸಿ. ಹೀಗೆ ಮಾಡಿ, ಮುಖಕ್ಕೆ ಹಚ್ಚಿಕೊಂಡರೆ, ಈ ಕ್ಯೂಬ್ ಸ್ಕ್ರಬ್‌ ರೀತಿ ಕೆಲಸ ಮಾಡುತ್ತದೆ.

ಹಾಲಿನ ಐಸ್‌ ಕ್ಯೂಬ್ಸ್ : ಹಾಲಿನ ಐಸ್‌ಕ್ಯೂಬ್ ಮಾಡೋದು ಸಿಕ್ಕಾಪಟ್ಟೆ ಸುಲಭ. ಒಂದು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಐಸ್ ಕ್ಯೂಬ್‌ ತಯಾರಿಸಿ ಬಳಸಿ.

Monsoon Special: ಮೊಳಕೆ ಕಾಳಿನ ಸಾಂಬಾರ್

Monsoon Special: ಮಿಕ್ಸ್ ವೆಜ್ ಸೂಪ್ ರೆಸಿಪಿ

Monsoon Special: ಟೊಮೆಟೋ ರಸಂ ರೆಸಿಪಿ

- Advertisement -

Latest Posts

Don't Miss